ಹೊಸದಿಗಂತ ವರದಿ ಹುಬ್ಬಳ್ಳಿ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವ ಹಾಗೂ ಶಕ್ತಿ ಕುಂದಿಸಲು ಬಿಜೆಪಿ ಕೇಂದ್ರ ನಾಯಕರು ಪ್ರಯತ್ನಿಸುತ್ತಿದ್ದಾರೆ ಎಂದು ಅಬಕಾರಿ ಇಲಾಖೆ ಸಚಿವ ಆರ್. ಬಿ. ತಿಮ್ಮಾಪುರ ತಿಳಿಸಿದರು.
ನಗರದಲ್ಲಿ ಮಂಗಳವಾರ ಖಾಸಗಿ ಹೋಟೆಲ್ ನಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಇದು ನಡೆಯುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತ ನೋಟಿಸ್ ನೀಡಿದೆ. ಬಿಜೆಪಿ ಕೇಂದ್ರ ನಾಯಕರು ಎದ್ದು ಬಿದ್ದು, ಸಿದ್ದರಾಮಯ್ಯ ಅವರ ಶಕ್ತಿ ಅಡಿಸಲು ಪ್ರಯತ್ನಿಸುತ್ತಿದೆ ಎಂದರು.
ವಿಧಾನ ಸಭೆ ಉಪಚುನಾವಣೆಯ ಹಿನ್ನೆಲೆ ಇಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತಿದೆ. ಶಿಗ್ಗಂವಾ ವಿಧಾನ ಸಭೆ ಉಪಚುನಾವಣೆ ನಾವು ಜಯಗಳಿಸುತ್ತೇವೆ ಎಂದು ಹೇಳಿದರು