Thursday, June 30, 2022

Latest Posts

ಕಲಬುರಗಿ| ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಮೋರ್ಚಾದಿಂದ ಉತ್ತಮ ಕಾರ್ಯ: ರಾಜ್ಯ ಉಪಾಧ್ಯಕ್ಷ ಲಲಿತಾ ಅನ್ನಪೂರ್ಣ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಕಲಬುರಗಿ:

ಕೋವಿಡ್ 19 ಸಂದರ್ಭದಲ್ಲಿ ಬಿಜೆಪಿ ಮಹಿಳಾ ಮೋಚಾ೯ ವತಿಯಿಂದ ಸಮಾಜದಲ್ಲಿ ಉತ್ತಮ ಸೇವಾ ಚಟುವಟಿಕೆಗಳು ನಡೆದಿವೆ ಎಂದು ಬಿಜೆಪಿ ಮಹಿಳಾ ಮೋಚಾ೯ ರಾಜ್ಯ ಉಪಾಧ್ಯಕ್ಷೆ ಲಲಿತಾ ಅನ್ನಪೂರ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆವರು ನಗರದ ಬಿಜೆಪಿ ಪಕ್ಷದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಹಿಳಾ ಮೋಚಾ೯ದ ದಕ್ಷಿಣ ಮಂಡಲದ ಕಾಯ೯ಕಾರಿಣಿ ಸಭೆಯಲ್ಲಿ ಮಾತನಾಡಿದರು.
ಮಹಿಳಾ ಮೋಚಾ೯ ವತಿಯಿಂದ ಜಿಲ್ಲೆಯಲ್ಲಿ 250 ಮಾಸ್ಕ್ ವಿತರಣೆ, ಬೀದಿಬದಿ ವ್ಯಾಪಾರಿಗಳಿಗೆ ಊಟದ ವ್ಯವಸ್ಥೆ, 650 ಸಸಿಗಳನ್ನು ನೆಡುವ ಮೂಲಕ ಆನೇಕ ಸೇವಾ ಚಟುವಟಿಕೆಗಳು ಪಕ್ಷದ ಅಡಿಯಲ್ಲಿ ನಡೆದಿವೆ ಎಂದು ಹಷ೯ ವ್ಯಕ್ತಪಡಿಸಿದರು.
ಮುಂಬರುವ ದಿನಗಳಲ್ಲಿ ಪಕ್ಷದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಕೈಮಗ್ಗ ದಿನಚರಣೆ, ರಕ್ಷಾ ಬಂಧನ ಕಾಯ೯ಕ್ರಮ ಹಾಗೂ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಂತಹ ಕಾಯ೯ಕ್ರಮಗಳು ನಮ್ಮ ಮ‌ಹಿಳಾ ಮೋಚಾ೯ ವತಿಯಿಂದ ನಡೆಯಲಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಮಹಿಳಾ ಮೋಚಾ೯ ಪ್ರಧಾನ ಕಾರ್ಯದರ್ಶಿ ಅನಿತಾ ಕೋರವಾರ ಮಾತನಾಡಿದರು.  ಶೋಭಾ ಭಾಗೇವಾಡಿ, ಚಂದ್ರಕಲಾ,ಸುವರ್ಣ ವಾಡೆ, ಇಂದ್ರಾ ಶೆಟ್ಟಿ, ಮೀನಾಕ್ಷಿ ಸೇರಿದಂತೆ ಅನೇಕ ಮಹಿಳಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss