Monday, August 8, 2022

Latest Posts

ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಆರೋಗ್ಯದಲ್ಲಿ ಏರುಪೇರು: ಏರ್​​​​​​​ ಆಂಬ್ಯುಲೆನ್ಸ್​​ ಮೂಲಕ ಮುಂಬೈಗೆ ರವಾನೆ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್​​ ಅವರ ಆರೋಗ್ಯದಲ್ಲಿ ಏರುಪೇರು ಕಂಡಿದ್ದು, ಅವರನ್ನು ಏರ್​​​​​​​ ಆಂಬ್ಯುಲೆನ್ಸ್​​ ಮೂಲಕ ಮುಂಬೈಗೆ ರವಾನೆ ಮಾಡಲಾಗಿದೆ.
ಕಳೆದ ಕೆಲ ದಿನಗಳ ಹಿಂದೆ ದೆಹಲಿಯ ಏಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಮನೆಗೆ ತೆರಳಿದ್ದ ಅವರ ಆರೋಗ್ಯದಲ್ಲಿ ಇದೀಗ ದಿಢೀರ್​ ಹದಗೆಟ್ಟಿರುವ ಕಾರಣ ಮುಂಬೈಗೆ ರವಾನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಮುಂಬೈನ ಕೋಕಿಲಾಬೆನ್​ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುವುದು ಎಂದು ತಿಳಿದು ಬಂದಿದೆ. ಇಂದು ಮಧ್ಯಾಹ್ನ ಸಾಧ್ವಿ ಜಿಲ್ಲಾ ಪಂಚಾಯತ್​ ಕಚೇರಿಯಲ್ಲಿನ ದಿಶಾ ಸಮಿತಿಯ ಸಭೆಯ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿತ್ತು. ಆದರೆ ದಿಢೀರ್​ ಆರೋಗ್ಯ ಹದೆಗೆಟ್ಟಿರುವ ಕಾರಣ ಇದೀಗ ಆಸ್ಪತ್ರೆಗೆ ದಾಖಲಾಗಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss