ಅಂಗೈ ಹುಣ್ಣಿಗೆ ಸಾಕ್ಷಿ ನೋಡಬೇಕಾದ ಅವಶ್ಯಕತೆ ಇಲ್ಲ : ಗ್ಯಾನವಾಪಿ ಬಗ್ಗೆ ಸಿ.ಟಿ.ರವಿ

ಹೊಸದಿಗಂತ ವರದಿ ಕಲಬುರಗಿ:
ಗ್ಯಾನವಾಪಿ ಮಸೀದಿ ಸರ್ವೇಕ್ಷಣಾ ಕಾರ್ಯ ಇನ್ನೂ ನಡೆಯುತ್ತಿದ್ದು, ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ ಮೇಲೆ ಏನೆಲ್ಲಾ ಸಿಕ್ಕಿದೆ ಎನ್ನುವುದು ಗೊತ್ತಾಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಂ ರಾಜರ ಆಳ್ವಿಕೆಯಲ್ಲಿ ಹಿಂದೂ ದೇವಾಲಯಗಳ ಮೇಲೆ ಮಸೀದಿಗಳನ್ನು ಕಟ್ಟಿದ್ದಾರೆ. ಈ ಸತ್ಯಕ್ಕೆ ಸಾಕ್ಷಿಗಳಿವೆ. ಎಂದರು.
ಶ್ರೀರಂಗಪಟ್ಟಣ ಮೂಡ ಬಾಗಿಲು ಆಂಜನೇಯ ದೇವಸ್ಥಾನ ಇದ್ದ ಬಗ್ಗೆಯೂ ಸಾಕ್ಷಿ ಇವೆ. ಟಿಪ್ಪು ಅದರ ಮೇಲೆ ಮಸೀದಿ ಕಟ್ಟಿರುವುದು ಅಲ್ಲಿನ ಮಕ್ಕಳಿಗೂ ಗೊತ್ತು. ಸರ್ವೇಕ್ಷಣೆ ಮಾಡಿದರೆ ಸತ್ಯ ಗೊತ್ತಾಗುತ್ತದೆ ಎಂದರು.

ಟಿಪ್ಪು ಕನ್ನಡ ಪ್ರೇಮಿ ಎಂದು ಹೇಳುತ್ತಾರೆ. ಆದರೆ ಆತ ಆಡಳಿತ ಭಾಷೆಯನ್ನು ಪಸಿ೯ಯನ್ ಭಾಷೆಯಾಗಿ ಮಾಡಿದ್ದನು. ಈ ಕುರಿತು ಸುಳ್ಳಿನ ತೆರೆ ಸರಿಸಿದರೆ ಸತ್ಯ ಗೊತ್ತಾಗುತ್ತದೆ ಎಂದರು.

ಶಾಲಾ ಆವರಣದಲ್ಲಿ ಭಜರಂಗದಳದಿಂದ ಶಸ್ತ್ರಾಸ್ತ್ರ ತರಬೇತಿ ವಿಚಾರವಾಗಿ ಮಾತನಾಡಿ, ಭಜರಂಗದಳವು ಪ್ರತಿ ವರ್ಷ ಅಭ್ಯಾಸ ವಗ೯ ನಡೆಸುತ್ತದೆ.ಪೋಲಿಸ್ ಇಲಾಖೆ ಕೂಡ ತರಬೇತಿ ನೀಡುತ್ತದೆ. ಆದರೆ ಬಾಂಬ್ ಹಾಕುವ ತರಬೇತಿ ಕೊಟ್ಟಿಲ್ಲ. ಎ.ಕೆ.-47 ರೈಫಲ್ ಕೊಟ್ಟು ತರಬೇತಿ ನೀಡಿಲ್ಲ. ಎರ್ ಗನ್ ತರಬೇತಿ ನೀಡಿದೆ.ಅದರಲ್ಲಿ ತಪ್ಪೇನಿಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!