ಬಿಜೆಪಿ ಪಕ್ಷದ ಕಾರ್ಯಾಲಯ ದೇವಾಲಯವಿದ್ದಂತೆ: ಈಶ್ವರಪ್ಪ

ಹೊಸದಿಗಂತ ವರದಿ, ಬಾಗಲಕೋಟೆ:
ಭಾರತೀಯ ಜನತಾ ಪಕ್ಷದ ಕಾರ್ಯಾಲಯ ದೇವಾಲಯವಿದ್ದಂತೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನವನಗರದಲ್ಲಿ ನೂತನವಾಗಿ ನಿರ್ಮಾಣವಾಗಿದ್ದ ಬಿಜೆಪಿ ಕಾರ್ಯಾಲಯ‌ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಸಾಮಾನ್ಯ ಜನರ, ರೈತರ, ಪಕ್ಷದ ಕಾರ್ಯಕರ್ತರು ಸಮಸ್ಯೆ ಹೊತ್ತು ತಂದಾಗ ಅವುಗಳನ್ನು ಪರಿಹರಿಸುವ ಕೆಲಸ ಪಕ್ಷದ ಕಾರ್ಯಾಲಯದಿಂದ ನಡೆಯಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಪಕ್ಷದ ಬೃಹತ್ ಶಕ್ತಿ ಕೇಂದ್ರವಾಗಿ ನಿರ್ಮಾಣವಾಗಿರುವ ಕಚೇರಿಯನ್ನು ನೋಡಿ ಬಾಗಲಕೋಟೆ ಜಿಲ್ಲೆಯ ಬದಾಮಿ ಬಿಟ್ಟು ಸಿದ್ದರಾಮಯ್ಯ ಓಡಿ ಹೋದರು. ಈಗ ಸಾಬರು ಜಾಸ್ತಿ ಇರುವ ಕ್ಷೇತ್ರವನ್ನು ಹುಡುಕುತ್ತಿದ್ದಾರೆ. ಬಿಜೆಪಿ ಪ್ರತಿ ಕ್ಷೇತ್ರದಲ್ಲಿ ಸದೃಢವಾಗುತ್ತಿರುವುದರಿಂದ ಸಿದ್ದರಾಮಯ್ಯ ಗೆ ಸೋಲಿನ ಭಯ ಶುರುವಾಗಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರು ವಿಶ್ವದ ನಾಯಕರಾಗಿ ಹೊರಹೊಮ್ಮಿದ್ದಾರೆ.ಅನೇಕ ವರ್ಷದ ರಾಮಮಂದಿರ ವಿವಾದ ಯಾವುದೇ ಸಮಸ್ಯೆ ಆಗದಂತೆ ಇತ್ಯರ್ಥ ಮಾಡಿದರು. ಮುಂದಿನ ದಿನಗಳಲ್ಲಿ ಕಾಶಿ,‌ ಮಥುರಾ ಹೀಗೆ ಭಾರತದಲ್ಲಿರುವ ಧಾರ್ಮಿಕ ಶ್ರದ್ಧಾ ಕೇಂದ್ರಗಳಾಗಲಿವೆ. ಧಾರ್ಮಿಕ ದೇವಾಲಯ ಮೊಘಲರ ಗುಂಡಾಗಿರಿಯಿಂದ ದಾಳಿಗೆ ಒಳಪಟ್ಟು ನಿರ್ಮಾಣವಾಗಿರುವ ಮಸೀದಿಗಳನ್ನು ಕಾನೂನು ರೀತಿ ಧ್ವಂಸ ಮಾಡಿ ದೇವಾಲಯ ನಿರ್ಮಾಣವಾಗುವ ಕಾಲ ಬಂದಿದೆ ಎಂದರು.
ಶಾಸಕ ವೀರಣ್ಣ ಚರಂತಿಮಠ, ಸಿದ್ದು ಸವದಿ, ವಿ.ಪ.ಸದಸ್ಯ ಪಿ.ಎಚ್.ಪೂಜಾರ, ಹಣಮಂತ ನಿರಾಣಿ, ವಿ.ಪ.,ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ರಾಜ್ಯ ಪ್ರ.ಕಾ.ಮಹೇಶ ಟೆಂಗಿನಕಾಯಿ, ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ,ರಾಜಶೇಕರ ಶೀಲವಂತ, ಬಸಲಿಂಗಪ್ಪ ನಾವಲಗಿ, ಮಲ್ಲಯ್ಯ ಮೂಗನೂರಮಠ, ಬಸವರಾಜ ಯಂಕಂಚಿ, ಅಶೋಕ ಪೂಜಾರಿ, ಸತ್ಯನಾರಾಯಣ ಹೇಮಾದ್ರಿ, ರಾಜು ನಾಯ್ಕರ, ಸಿ.ಟಿ.ಉಪಾಧ್ಯ, ರಾಜು ನಾಯ್ಕರ, ರಾಜು ರೇವಣಕರ, ರಾಜು‌ಮುದೇನೂರ, ಹೂವಪ್ಪ ರಾಠೋಡ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!