ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, August 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

12 ಮಂದಿ ನಿರ್ಗತಿಕರ ಚಿತಾಭಸ್ಮವನ್ನು ಸಮುದ್ರಕ್ಕೆ ಬಿಟ್ಟ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾದಿಂದ ಮೃತಪಟ್ಟ 12 ನಿರ್ಗತಿಕರಿಗೆ ಮೋಕ್ಷ ಪ್ರಾಪ್ತಿಗಾಗಿ ದ.ಕ. ಜಿಲ್ಲಾಡಳಿತದ ವತಿಯಿಂದ ಸೋಮೇಶ್ವರದ ಸೋಮನಾಥೇಶ್ವರ ದೇವಸ್ಥಾನದ ಸಮುದ್ರ ತೀರದಲ್ಲಿ ತಿಲಹೋಮ ನಡೆಯಿತು. ಬಳಿಕ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಮೃತರ ಚಿತಾಭಸ್ಮವನ್ನು ಸಮುದ್ರಕ್ಕೆ ಬಿಟ್ಟರು.
ಈ ವೇಳೆ ಮಾತನಾಡಿದ ಕಟೀಲ್, ರಾಜ್ಯದಲ್ಲಿ ಕೋವಿಡ್‌-19ನಿಂದ ಮೃತಪಟ್ಟ ನಿರ್ಗತಿಕರಿಗೆ ಮೋಕ್ಷಪ್ರದ ಆಗಬೇಕು. ಅಲ್ಲದೆ, ಕುಟುಂಬದಿಂದ ದೂರವಿದ್ದು ಮೃತಪಟ್ಟವರ ಆತ್ಮಕ್ಕೆ ಸದ್ಗತಿ ಸಿಗುವ ಉದ್ದೇಶದಿಂದ ಚಿತಾಭಸ್ಮವನ್ನು ವಿಸರ್ಜಿಸಲು ಸರ್ಕಾರ ಸೂಚಿಸಿದೆ. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮೃತಪಟ್ಟ 12 ನಿರ್ಗತಿಕರ ಆತ್ಮಗಳಿಗೆ ಮೋಕ್ಷ ಕಲ್ಪಿಸಲು ಪ್ರಾರ್ಥಿಸಲಾಗಿದೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss