ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………..
ಹೊಸದಿಗಂತ ವರದಿ,ಚಾಮರಾಜನಗರ:
ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಕೋವಿಡ್ ಅಸ್ಪತ್ರೆಗೆ ಬೆಳಗ್ಗೆ ಚುಡಾ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಎಸ್. ಬಾಲಸುಬ್ರಮಣ್ಯಂ ಹಾಗೂ ಆರ್ಎಸ್ಎಸ್ ಕಾರ್ಯವಾಹ ಮಹದೇಶ್, ಜಿಲ್ಲಾ ಪ್ರಚಾರಕ್ ಪ್ರಶಾಂತ್, ಹೇಮಂತ್, ಚಂದ್ರಶೇಖರ್ ರಾವ್ ಭೇಟಿ ನೀಡಿ ಕೋವಿಡ್ ಸೋಂಕಿತರ ಆರೋಗ್ಯ ವಿಚಾರಿಸಿದರು.
ಬೆಳಗ್ಗೆ ಅಸ್ಪತ್ರೆಯ ವೈದ್ಯರ ಅನುಮತಿ ಪಡೆದು, ಮಾಸ್ಕ್, ಪೇಸ್ ಸೀಲ್ಡ್, ಗ್ಲೌಸ್ಗಳನ್ನು ಧರಿಸಿ, ವಾರ್ಡುಗಳಿಗೆ ತೆರಳಿ ಪ್ರತಿಯೊಬ್ಬರ ಆರೋಗ್ಯ ವಿಚಾರಿಸಿದರು. ಉತ್ತಮ ಚಿಕಿತ್ಸೆ ದೊರೆಯುತ್ತಿರುವ ಬಗ್ಗೆ ರೋಗಿಗಳನ್ನು ವಿಚಾರಿಸಿ ತಿಳಿದುಕೊಂಡರು. ಧೈರ್ಯವಾಗಿದ್ದು, ಗುಣಮುಖರಾಗಿ ಹೊರ ಬರುವಂತೆ ಕೋರಿದರು.