ಹೊಸದಿಗಂತ ಆನ್ ಲೈನ್ ಡೆಸ್ಕ್:
ಪಶ್ಚಿಮ ಬಂಗಾಳದ ಬಾಬಾನಿಪುರದಲ್ಲಿ ಇಂದು ಮನೆ ಮನೆಗೆ ಹೋಗಿ ಮತ ಯಾಚಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಹಿರಿಯ ಮುಖಂಡ ಸಮರೇಂದ್ರ ಪ್ರಸಾದ್ ಬಿಸ್ವಾಸ್ ಅವರ ನಿವಾಸದಲ್ಲಿ ಮಧ್ಯಾಹ್ನದ ಭೋಜನ ಸವಿದರು.
ಪಕ್ಷದ ಮುಖಂಡರಾದ ಪಕ್ಷದ ಮುಖಂಡರಾದ ಸ್ವಪನ್ ದಾಸ್ಗುಪ್ತಾ ಮತ್ತು ದಿನೇಶ್ ತ್ರಿವೇದಿ ಕೂಡ ಪಾಲ್ಗೊಂಡಿದ್ದರು.
ಅಮಿತ್ ಶಾ ಅವರ ಮಧ್ಯಾಹ್ನದ ಊಟಕ್ಕಾಗಿ ಲುಚಿ, ರೊಟ್ಟಿ, ಚಾಲ್ಲರ್ ದಾಲ್, ಬೈಂಗನ್ ಭಜಾ, ಕುಮ್ರೊ (ಕುಂಬಳಕಾಯಿ) ಭಜಾ, ಪಟಾಲ್ ಸಬ್ಜಿ, ಚನಾರ್ (ಪನೀರ್) ದಾಲ್ನಾ, ಧೋಕರ್ ದಾಲ್ನಾ, ಭಿಂದಿ ಸಬ್ಜಿ, ಮಾವಿನ ಚಾಟ್ನಿ, ಪಾಪಾಡ್ ಮತ್ತು ಐದು ವಿಧದ ಕೋಲ್ಕತ್ತಾದ ವಿಶೇಷ ಸಿಹಿತಿಂಡಿಗಳನ್ನು ತಯಾರಿಸಲಾಗಿತ್ತು.