ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾಗೆ ಮುಸ್ಲಿಮರಿಂದ ಕೊಲೆ ಅತ್ಯಾಚಾರದ ಬೆದರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಪ್ರವಾದಿ ಮೊಹಮದ್ದರ ಕುರಿತು ವಿವಾದಾತ್ಮಕವಾಗಿ ಮಾತನಾಡಿದ್ದೇನೆಂದು ನನಗೆ ಕೊಲೆ, ಅತ್ಯಾಚಾರದ ಬೆದರಿಕೆಗಳು ಬರುತ್ತಿವೆ ಎಂದು ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾ ಕಳವಳ ವ್ಯಕ್ತಪಡಿಸಿದ್ದಾರೆ.

“ಟಿವಿ ಮಾಧ್ಯಮವೊಂದರ ಡಿಬೇಟ್‌ನಲ್ಲಿ ನಾನು ಮಾತನಾಡಿರುವುದನ್ನು ಎಡಿಟ್‌ ಮಾಡಿ ಆಲ್ಟ್‌ ನ್ಯೂಸ್‌ ನ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್ ಅವರು ಟ್ವೀಟ್‌ ಮಾಡಿದ್ದಾರೆ. ಅದರ ನಂತರ ನನಗೆ ಶಿರಚ್ಛೇದ ಬೆದರಿಕೆಗಳು ಸೇರಿದಂತೆ ಕೊಲೆ ಮತ್ತು ಅತ್ಯಾಚಾರ ಬೆದರಿಕೆಗಳು ಬರುತ್ತಿವೆ. ನನಗೆ ಅಥವಾ ನನ್ನ ಕುಟುಂಬಕ್ಕೆ ಏನಾದರೂ ಆದರೆ ಅವರೇ ಹೊಣೆಯಾಗುತ್ತಾರೆ” ಎಂದು ನೂಪುರ್‌ ಶರ್ಮಾ ಆರೋಪಿಸಿದ್ದಾರೆ.

ಶುಕ್ರವಾರ ಆಲ್ಟ್‌ ನ್ಯೂಸ್ ಜುಬೈರ್ ಅವರು ಜ್ಞಾನವಾಪಿ ಮಸೀದಿ ಪ್ರಕರಣದ ದೂರದರ್ಶನ ಸುದ್ದಿ ಚರ್ಚೆಯ 86 ಸೆಕೆಂಡುಗಳ ಕ್ಲಿಪ್ ಅನ್ನು ಟ್ವೀಟ್ ಮಾಡಿದ್ದಾರೆ, ಇದರಲ್ಲಿ ಶರ್ಮಾ ಪ್ರವಾದಿ ಮುಹಮ್ಮದ್ ಅವರ ವಿವಾಹದ ಬಗ್ಗೆ‌ ಮಾತನಾಡಿದ್ದಾರೆ. ಇದರಿಂದ ಕುಪಿತಗೊಂಡ ಕೆಲವು ಮುಸ್ಲಿಮರು ನೂಪುರ್‌ ಶರ್ಮಾರವರಿಗೆ ಬೆದರಿಕೆ ಹಾಕುತ್ತಿದ್ದಾರೆ ಎನ್ನಲಾಗಿದೆ. ತಕ್ಷಣವೇ ನೂಪುರ್‌ ಶರ್ಮಾರವರು ದೆಹಲಿ ಪೋಲೀಸರನ್ನು ಟ್ಯಾಗ್‌ ಮಾಡಿದ್ದು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಪೋಲೀಸರು ಪ್ರತಿಕ್ರಿಯೆ ನೀಡಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!