Wednesday, June 29, 2022

Latest Posts

ಬಿಜೆಪಿ ಸಂಸದ ಗೌತಮ್ ಗಂಭೀರ್ ಗೆ ಐಸಿಸ್ ಉಗ್ರರಿಂದ ಕೊಲೆ ಬೆದರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಮುಖಂಡ ಗೌತಮ್ ಗಂಭೀರ್ ಗೆ ಐಸಿಸ್ ಉಗ್ರರಿಂದ ಕೊಲೆ ಬೆದರಿಕೆ ಬಂದಿದೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ದೆಹಲಿ ಡಿಸಿಪಿ ಸೆಂಟ್ರಲ್ ಶ್ವೇತಾ ಚೌಹಾಣ್ ಮಾಹಿತಿ ನೀಡಿದ್ದು, ಗೌತಮ್ ಗಂಭೀರ್ ಅವರಿಗೆ ಇ ಮೇಲ್ ಮೂಲಕ ಐಸಿಸ್ ಕಾಶ್ಮೀರದಿಂದ ಜೀವ ಬೆದರಿಕೆ ಸಂದೇಶ ಬಂದಿದೆ. ಈ ಬಗ್ಗೆ ಸ್ವತಃ ಗೌತಮ್ ಗಂಭೀರ್ ಅವರೇ ದೂರು ನೀಡಿದ್ದಾರೆ. ಹಾಗಾಗಿ ಅವರ ನಿವಾಸದ ಸುತ್ತ ಪೊಲೀಸ್ ಬಿಗಿ ಭದ್ರತೆ ನಿಯೋಜಿಸಲಾಗಿದೆ ಎಂದರು
ಪೊಲೀಸರು ಈ ಕುರಿತು ಆಳ ತನಿಖೆಗೆ ಮುಂದಾಗಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss