Wednesday, June 29, 2022

Latest Posts

ವಿಧಾನ ಪರಿಷತ್ ಚುನಾವಣೆ: ಮೊದಲ ಸುತ್ತಿನಲ್ಲಿ ಬಿಜೆಪಿಯ ಸುಜಾಕುಶಾಲಪ್ಪ ಮುನ್ನಡೆ

ದಿಗಂತ ವರದಿ ಮಡಿಕೇರಿ:

ವಿಧಾನ ಪರಿಷತ್ ಚುನಾವಣಾ ಮತ ಎಣಿಕೆ ನಗರದ ಸಂತ ಜೋಸೆಫರ ಶಾಲೆ ಆವರಣದಲ್ಲಿ ಆರಂಭವಾಗಿದ್ದು, ಮೊದಲ ಸುತ್ತಿನ ಮತ ಎಣಿಕೆಯ ಸಂದರ್ಭ ಬಿಜೆಪಿಯ ಸುಜಾ ಕುಶಾಲಪ್ಪ ಅವರು 93 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಆರು ಟೇಬಲ್ ಗಳಲ್ಲಿ ಮತ ಎಣಿಕೆ ಮಾಡಲಾಗುತ್ತಿದ್ದು, ಒಂದು ಟೇಬಲ್ ನಲ್ಲಿ ತಲಾ 20 ಮತ ಪತ್ರಗಳ ಕಟ್ಟುಗಳಂತೆ ಒಂದು ಸುತ್ತಿನಲ್ಲಿ 200ಮತಗಳನ್ನು ಎಣಿಕೆ ಮಾಡಲಾಗುತ್ತಿದೆ.
ಎಣಿಕೆಗೂ ಮುನ್ನ ಎಲ್ಲ ಮತ ಪತ್ರಗಳ ಮಿಶ್ರಣ ನಡೆಯಲಿದ್ದು, ರಾಜಕೀಯ ಪಕ್ಷಗಳ ಕಾರ್ಯಕರ್ತರು ಕುತೂಹಲದಿಂದ ಕಾಯುತ್ತಿದ್ದಾರೆ.
ಜಿಲ್ಲೆಯ ಮೇಲೆ ಮೂಲೆಗಳಿಂದ ಕಾಂಗ್ರೆಸ್ ಹಾಗೂ ಬಿಜೆಪಿಬಕಾರ್ಯಕರ್ತರು ಆಗಮಿಸಿದ್ದು,ಮತ ಎಣಿಕೆ ಕೇಂದ್ರ ಹಾಗೂ ಸುತ್ತಲ‌ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss