ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುವ ಪೀಳಿಗೆ ಹೆಚ್ಚಿನ ಪಕ್ಷ ಸಿನಿಮಾಗಳಿಗಿಂತ ವೆಬ್ ಸೀರೀಸ್‌ಗಳನ್ನು ನೋಡುತ್ತಾರೆ. ಇದೀಗ ವೆಬ್‌ಸೀರೀಸ್ ಪ್ರೇಮಿಗಳ ಖುಷಿ ಹೆಚ್ಚಿಸೋ ಸುದ್ದಿಯೊಂದು ಹೊರಬಂದಿದೆ. ಕನ್ನಡದಲ್ಲಿ ಬ್ಲ್ಯಾಕ್ ಆಂಡ್ ವೈಟ್ ಹೆಸರಿನ ಸೀರೀಸ್ ಒಂದು ರಿಲೀಸ್ ಆಗಲಿದೆ.
ಹೊಸಬರ ತಂಡ ಈ ಸೀರೀಸ್ ಮಾಡಿದ್ದು, ಜ.8ರಂದು ಒಟಿಟಿಯಲ್ಲಿ ರಿಲೀಸ್ ಆಗಲಿದೆ. ರಂಗಭೂಮಿ ಹಿನ್ನೆಲೆಯ ಕಲಾವಿದರ ಹೊಸ ಪ್ರಯತ್ನ ಇದಾಗಿದ್ದು, ಕೇರಳ ಮೂಲದ ನೀಸ್ಟ್ರೀಮ್‌ನಲ್ಲಿ ಬ್ಲ್ಯಾಕ್ ಆಂಡ್ ವೈಟ್ ಪ್ರಸಾರ ಆಗಲಿದೆ.
20 ನಿಮಿಷಗಳ ಮೂರು ಎಪಿಸೋಡ್ ಇರುವ ಸೀರೀಸ್ ಮೇಲೆ ಪ್ರೇಕ್ಷಕರಿಗೆ ಸಾಕಷ್ಟು ನಿರೀಕ್ಷೆ ಇದೆ. ಸ್ಟಾರ್ ಸಿನಿಮಾಗಳ ಜತೆ ಪ್ರೇಕ್ಷಕರು ಹೊಸಬರಿಗೂ ಇತ್ತೀಚೆಗೆ ಪ್ರೋತ್ಸಾಹ ನೀಡುತ್ತಿದ್ದು, ಸೀರೀಸ್ ಹೇಗಿದೆ ಕಾದು ನೋಡಬೇಕಿದೆ.