Thursday, August 11, 2022

Latest Posts

ಬೀದರ್ ಜಿಲ್ಲೆಯ 21 ಜನರಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣ ಪತ್ತೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………….

ಹೊಸ ದಿಗಂತ ವರದಿ, ಬೀದರ :

ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಕೊರೋನಾ ಸೋಂಕಿತರಲ್ಲಿ ಬ್ಲ್ಯಾಕ್‌ ಫಂಗಸ್‌ ಕಾಣಿಸಿಕೊಳ್ಳುತ್ತಿದ್ದು, ಶನಿವಾರ ಒಂದೇ ದಿನ 16ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಬೀದರ್‌ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 21 ಪ್ರಕರಣಗಳು ಪತ್ತೆಯಾಗಿವೆ. ಭಾನುವಾರ ಮತ್ತೇ 5 ಜನರಲ್ಲಿ ಬ್ಲ್ಯಾಕ್ ಫಂಗಸ್ ಕಂಡು ಬಂದಿದೆ ಎಂದು ಆರೋಗ್ಯ ಇಲಾಖೆ ಬುಲೆಟಿನ್ ನಲ್ಲಿ ಮಾಹಿತಿ ನೀಡಿದ್ದಾರೆ. ಬೀದರ್‌ ಜಿಲ್ಲೆಯಲ್ಲಿ ಬ್ಲ್ಯಾಕ್‌ ಫಂಗಸ್‌ ಹಾವಳಿ ಹೆಚ್ಚಾಗಿದ್ದು 21 ಮಂದಿಯಲ್ಲಿ ಕಾಣಿಸಿಕೊಂಡು ಮೂವರ ಕಣ್ಣು ತೆಗೆಯಲಾಗಿದೆ ಎಂದು ತಿಳಿದು ಬಂದಿದೆ.
ಕೊರೊನಾ ಪಾಸಿಟಿವ್ ಇದ್ದವರಲ್ಲಿ ಶ್ವಾಸಕೋಶದ ಸಮಸ್ಯೆ ಉದ್ಭವಿಸಿದಾಗ ಸ್ಟೇರಾಯಿಡ್ ಗಳ ಹೆಚ್ಚು ಬಳಕೆ ಡಯಾಬಿಟೀಸ್ ಇನ್ಸುಲೀನ್ ಪಡೆಯುತ್ತಿರುವ ಜನರಲ್ಲಿ ಬ್ಲ್ಯಾಕ್ ಫಂಗಸ್ ನ ಲಕ್ಷಣಗಳು ಬರಲು ಕಾರಣ ಎಂದು ತಜ್ಞ ವೈದ್ಯರು ಹೇಳಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ನ ಚಿಕಿತ್ಸೆಗೆ ಬೇಕಾಗುವ ಆ್ಯಂಪೋಟೆರಿಸಿನ್ ಬಿ ಇಂಜೆಕ್ಷನ್ ಬ್ರೀಮ್ಸ್ ಸೇರಿದಂತೆ ಜಿಲ್ಲೆಯ ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ಲಭ್ಯವಿಲ್ಲ, ನೆರೆಯ ತೆಲಂಗಾಣದ ಹೈದರಾಬಾದ್ ನಲ್ಲಿಯೂ ಸ್ಟಾಕ್ ತೀರ ಕಮ್ಮಿ ಇದೆ, ಬ್ಲ್ಯಾಕ್ ಫಂಗಸ್ ಇರುವ ರೋಗಿಗಳು ಗುಣಮುಖರಾಗಲು 6 ರಿಂದ 12 ಆ್ಯಂಪೋಟೆರಿಸಿನ್ ಬಿ ಇಂಜೆಕ್ಷನ್ ಡೋಸ್ ಗಳು ಬೇಕಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಇಂಜೆಕ್ಷನ್ ಸಿಗದ ಕಾರಣ ಪರ್ಯಾಯ ಮಾತ್ರೆಗಳನ್ನು ವೈದ್ಯರು ಸೂಚಿಸುತ್ತಿದ್ದಾರೆ ಆದರೆ ಪರ್ಯಾಯ ಮಾತ್ರೆಗಳಿಂದ ಅಷ್ಟೇನು ಪ್ರಯೋಜನ ಆಗುತ್ತಿಲ್ಲ, ಇಂತಹ ಪರಿಸ್ಥಿತಿಯಲ್ಲಿ ರೋಗಕ್ಕೆ ತುತ್ತಾಗಿರುವ ವ್ಯಕ್ತಿಯಲ್ಲಿ ತೀವ್ರ ಸಮಸ್ಯೆ ಇದ್ದರೇ ಜೀವಕ್ಕೆ ಅಪಾಯ ಇದೆ ಎಂದು ವೈದ್ಯರು ಹೇಳುತ್ತಿದ್ದಾರೆ.
ಸ್ಟಿರಾಯ್ಡ್‌ನಿಂದ ಸಮಸ್ಯೆ ಫಂಗಸ್ ಹೆಚ್ಚಳ
ಬ್ಲ್ಯಾಕ್‌ ಫಂಗಸ್‌ ಹೊಸತಲ್ಲ. ಇದು ಗಾಳಿ, ಮಣ್ಣು, ಕೆಲವೊಮ್ಮೆ ನಮ್ಮ ಆಹಾರದಲ್ಲೂ ಇರುತ್ತದೆ. ಇದು ವೈರಸ್‌ನಷ್ಟು ತೀವ್ರವಲ್ಲ. ಆದರೆ ಸೋಂಕಿತರಿಗೆ ಸ್ಟಿರಾಯ್ಡ್‌ ನೀಡುತ್ತಿರುವ ಪರಿಣಾಮಗಳ ಅವುಗಳ ತೀವ್ರತೆ ಹೆಚ್ಚಿ, ರೋಗಿಗಳಲ್ಲಿ ಸಮಸ್ಯೆಯಾಗುತ್ತಿದೆ, ಮೂಗು, ಕಣ್ಣು, ಹುಬ್ಬಿನ ಭಾಗದಲ್ಲಿ ನೋವು ಚರ್ಮದ ಮೇಲೆ ಕಪ್ಪು ಚುಕ್ಕೆ ಕಾಣಿಸಿ ತೀವ್ರ ತಲೆನೋವು ಇದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ, ಸಯಮವಿದ್ದಾಗ ವೈದರ ಸಂಪರ್ಕಿಸಿದರೆ ಚಿಕಿತ್ಸೆ ಮೂಲಕ ಸರಿಪಡಿಸಬಹುದು, ಅನಗತ್ಯ ಗೊಂದಲ, ಗಾಳಿ ಮಾತನ್ನ ನಂಬದೆ ಸಮಸ್ಯೆ ಇದ್ದರೆ ವೈದ್ಯರ ಸಲಹೆ ಪಡೆಯಿರಿ ಹೆದರುವುದು ಬೇಕಿಲ್ಲ ಎಂದು ಬೀದರನ ಐಎಮ್ ಎ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಹಾಗೂ ಇಎನ್ ಟಿ ತಜ್ಞ ಡಾ. ನಾಗರಾಜ್ ಹೊಸ ದಿಗಂತಕ್ಕೆ ಪ್ರತಿಕ್ರಿಯಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss