Monday, August 8, 2022

Latest Posts

ಅಫಘಾನಿಸ್ತಾನದ ಜಲಾಲಾಬಾದ್ ನಲ್ಲಿ ಸ್ಫೋಟ: ಇಬ್ಬರ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಅಘಘಾನಿಸ್ತಾನದ ಜಲಾಲಾಬಾದ್ ನಲ್ಲಿ ನಿನ್ನೆ ನಡೆದ ಮೂರು ಸ್ಫೋಟಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಅಮೆರಿಕ ಸೇನೆಯು ತವರಿಗೆ ತೆರಳಿದ ನಂತರ ನಡೆದ ಮೊದಲು ದಾಳಿ ಇದಾಗಿದೆ. ನಡೆದ ಮೂರು ಸ್ಫೋಟಗಳ ಪೈಕಿ ಒಂದನ್ನು ತಾಲಿಬಾನ್‌ ಸೈನಿಕರ ವಾಹನವನ್ನು ಗುರಿ ಮಾಡಿಕೊಂಡು ನಡೆಸಲಾಗಿತ್ತು ಎನ್ನಲಾಗಿದೆ.

ಆದರೆ ಈ ದಾಳಿಯ ಹೊಣೆಯನ್ನು ಇದುವರೆಗೂ ಯಾವ ಸಂಘಟನೆಯೂ ಹೊತ್ತುಕೊಂಡಿಲ್ಲ. ಇಸ್ಲಾಮಿಕ್ ಸ್ಟೇಟ್‌ನ ಅಫ್ಘನ್ ಘಟಕವು ತಾಲಿಬಾನ್ ಅನ್ನು ಗುರಿ ಮಾಡಿಕೊಂಡು ದಾಳಿ ನಡೆಸಿದೆ ಎನ್ನಲಾಗಿದೆ.

‘ಮೂರು ಸ್ಫೋಟಗಳಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಹಲವರಿಗೆ ಗಾಯಗಳಾಗಿವೆ. ಜಲಾಲಾಬಾದ್‌ನಲ್ಲಿ ಗಸ್ತು ತಿರುಗುತ್ತಿದ್ದ ತಾಲಿಬಾನ್‌ನ ಸೈನಿಕರ ವಾಹನವನ್ನು ಗುರಿ ಮಾಡಿಕೊಂಡು ದಾಳಿ ನಡೆಸಿರುವ ಸಾಧ್ಯತೆ ಇದೆ’ ಎಂದು ತಾಲಿಬಾನ್ ಮಾಹಿತಿ ನೀಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss