ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯ ಶಂಕರಪುರಂನಲ್ಲಿ ಪಟಾಕಿ ಅಂಗಡಿಯಲ್ಲಿ ಸ್ಫೋಟ ಸಂಭವಿಸಿದ್ದು, ಆರು ಮಂದಿ ಮೃತಪಟ್ಟಿದ್ದಾರೆ.
ಅಂಗಡಿಗೆ ಬೆಂಕಿ ಹೊತ್ತಿದ್ದು, ಅಂಗಡಿಯೊಳಗಿದ್ದ ಐವರು ಸಜೀವ ದಹನವಾಗಿದ್ದಾರೆ.
ದೀಪಾವಳಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಶಂಕರಪುರಂನಲ್ಲಿ ಅಂಗಡಿ ಇಡಲಾಗಿತ್ತು. ತಡರಾತ್ರಿ ಸ್ಫೋಟವಾಗಿದ್ದು, ಐವರು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ.
ಈಗಾಗಲೇ ಬೆಂಕಿ ನಂದಿಸಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.