Sunday, February 28, 2021

Latest Posts

ವೈದ್ಯಕೀಯ ಸೀಟ್‌ಗಳ ಬ್ಲಾಕಿಂಗ್ ದಂಧೆ: ಕಠಿಣ ಕ್ರಮಕ್ಕೆ ಎಬಿವಿಪಿ ಒತ್ತಾಯ

ಹೊಸದಿಗಂತ ವರದಿ, ಶಿವಮೊಗ್ಗ:

ವೈದ್ಯಕೀಯ ಸೀಟ್‌ಗಳ ಬ್ಲಾಕಿಂಗ್ ದಂಧೆಯಲ್ಲಿ ತೊಡಗಿದವರ ವಿರುದ್ದ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿ ಮಂಗಳವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಸಾಗರ ಉಪವಿಭಾಗಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಲಾಯಿತು.
ಬಡ ಮತ್ತು ಪ್ರತಿಭಾವಂತ ಮಕ್ಕಳಿಗೆ ನ್ಯಾಯವಾಗಿ ವೈದ್ಯಕೀಯ ಮತ್ತು ಇಂಜಿನೀಯರಿಂಗ್ ಸೀಟುಗಳು ದೊರೆಯಲಿ ಎನ್ನುವ ಉದ್ದೇಶದಿಂದ ಸಿಇಟಿ ಪರೀಕ್ಷೆಗಳನ್ನು ಜಾರಿ ಮಾಡಲು ಎಬಿವಿಪಿ ರಾಜ್ಯದೆಲ್ಲೆಡೆ ಹೋರಾಟ ನಡೆಸಿತ್ತು. ಈ ಹೋರಾಟದ ಫಲವಾಗಿ ಸಿಇಟಿ ಪರೀಕ್ಷೆಗಳನ್ನು ಜಾರಿಗೆ ತರಲಾಗಿದೆ .
ಇದೀಗ ಕರ್ನಾಟಕದ ಪ್ರತಿಷ್ಟಿತ ಮೆಡಿಕಲ್ ಕಾಲೇಜುಗಳು ಮೆಡಿಕಲ್ ಸೀಟ್‌ಗಳ ಬ್ಲಾಕಿಂಗ್ ದಂಧೆಯಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ. ಐಟಿ ಅಧಿಕಾರಿಗಳು ಈ ದಂಧೆಯನ್ನು ಸಾಕ್ಷಿ ಸಮೇತ ಬಯಲಿಗೆ ತಂದಿದ್ದಾರೆ. ಸೀಟುಗಳ ಮಾರಾಟದಿಂದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುವ ಜೊತೆಗೆ ಆದಾಯ ಇಲಾಖೆ ಕಾಯ್ದೆ ಕೂಡ ಉಲ್ಲಂಘನೆಯಾಗಿದೆ. ವೈದ್ಯಕೀಯ ಸೀಟುಗಳ ಬ್ಲಾಕಿಂಗ್ ದಂಧೆಯಲ್ಲಿ ತೊಡಗಿದವರ ವಿರುದ್ದ ಸರ್ಕಾರ ಯಾವುದೇ ಒತ್ತಡಕ್ಕೂ ಮಣಿಯದೆ ಕಠಿಣ ಕಾನೂನುಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಎಬಿವಿಪಿ ತಾಲ್ಲೂಕು ಅಧ್ಯಕ್ಷ ಡಾ. ಶ್ರೀಪಾದ ಹೆಗಡೆ,  ಅಭಿಷೇಕ್ ಎಂ. ಶೆಟ್ಟಿ,  ಅಕ್ಷಯ್ ಎಸ್., ಪ್ರೀತಮ್ ಎನ್., ಪ್ರಮುಖ್ ಕೆ.ಎಸ್., ದರ್ಶನ್ ಆರ್., ಸುಮಂತ್ ಬಿ.ಜಿ., ಕೃತಿ ಜೋಯ್ಸಾ, ಪೂರ್ಣಶ್ರೀ, ರಾಕೇಶ್ ಎನ್., ಅಭಿಷೇಕ್ ರಾಯ್ಕರ್ ಇನ್ನಿತರರು ಹಾಜರಿದ್ದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!