ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ರಕ್ತ ಹೀನತೆ ಸಮಸ್ಯೆಯಿಂದ ಬಳಲುತ್ತಿದ್ದ ಬೆಂಗಳೂರಿನ 11 ವರ್ಷದ ‘ತ್ವರಿತ್’ಗೆ ಜರ್ಮನಿಯ 26 ವರ್ಷದ ವ್ಯಕ್ತಿಯೊಬ್ಬರು ರಕ್ತದ ಆಕರಕೋಶಗಳನ್ನು ದಾನ ಮಾಡಿದ್ದು, ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
‘ತ್ವರಿತ್’ ಮತ್ತು ಜರ್ಮನಿಯ ರಕ್ತದ ಆಕರಕೋಶ ದಾನಿ ‘ಡುಕ್ ಫಾಮ್ ಎಂಗಾಕ್’ ಜಾಗತಿಕ ರಕ್ತದ ಆಕರಕೋಶ ದಾನಿಗಳ ನೋಂದಣಿ ಸೇವಾ ಸಂಸ್ಥೆ ‘ಡಿಕೆಎಂಎಸ್-ಬಿಎಂಎಸ್ಟಿ ಫೌಂಡೇಷನ್’ ಆಯೋಜಿಸಿದ್ದ ಆನ್ಲೈನ್ ಕಾರ್ಯಕ್ರಮದಲ್ಲಿ ಮುಖಾಮುಖಿಯಾಗಿದ್ರು.
‘ತ್ವರಿತ್ ಗೆ ಅಗತ್ಯ ಪ್ರಮಾಣದಲ್ಲಿ ರಕ್ತದ ಜೀವಕೋಶಗಳು ಉತ್ಪಾದನೆಯಾಗುತ್ತಿರಲಿಲ್ಲ. ಆರೋಗ್ಯ ಹದಗೆಟ್ಟಿತ್ತು. ಈತ ಚೇತರಿಸಿಕೊಳ್ಳಲು ರಕ್ತದ ಆಕರಕೋಶ ಕಸಿ ಅಗತ್ಯವಾಗಿತ್ತು. ಆರು ವರ್ಷಗಳ ಹಿಂದೆಯೇ ಡುಕ್ ಫಾಮ್ ಎಂಗಾಕ್ ಅವರು ರಕ್ತದ ಆಕರಕೋಶ ದಾನಕ್ಕೆ ಹೆಸರು ನೋಂದಾಯಿಸಿದ್ದರು. ಅವರ ರಕ್ತದ ಆಕರಕೋಶವು ಬಾಲಕನಿಗೆ ಹೊಂದಾಣಿಕೆಯಾಯಿತು’ ಎಂದು ಸಂಸ್ಥೆ ಮಾಹಿತಿ ನೀಡಿದೆ.
‘ರಕ್ತದ ಆಕರ ಕೋಶ ರಕ್ತ ಕ್ಯಾನ್ಸರ್ನಿಂದ ಬಳಲುತ್ತಿರುವ ರೋಗಿಗಳನ್ನು ಕಾಪಾಡಲು ಅಗತ್ಯ.. ದಾನಿಗಳ ರಕ್ತದಿಂದ ಆಕರ ಕೋಶಗಳನ್ನು ಪಡೆದು, ಅಸ್ಥಿಮಜ್ಜೆ ಹಾಳಾಗಿರುವಂತಹ ರೋಗಿಗಳಿಗೆ ಕಸಿ ಮಾಡಲಾಗುತ್ತದೆ. ಆದರೆ ಇದು ರೋಗಿಗಳ ಕುಟುಂಬದಲ್ಲಿಯೇ ಹೊಂದಾನಿಕೆಯಾಗಬಲ್ಲ ದಾನಿಗಳು ಸಿಗುವುದು ವಿರಳ’ ಎಂದು ತ್ವರಿತ್ ಗೆ ಚಿಕಿತ್ಸೆನೀಡಿದ ನಾರಾಯಣ ಹೆಲ್ತ್ ಸಿಟಿಯ ಡಾ.ಸುನಿಲ್ ಭಟ್ ಮಾಹಿತಿ ನೀಡಿದ್ದಾರೆ.