Sunday, April 18, 2021

Latest Posts

ಲಾಕ್ ಡೌನ್ ದಿನಗಳಲ್ಲಿ ತರಕಾರಿ ತರೋಕೆ ಕ್ಯೂ ನಿಂತು‌,ನಿಂತು ಸಾಕಾದ ದಂಪತಿ ಮಹಡಿ ಮೇಲೆ ತೋಟವನ್ನೇ ಮಾಡ್ಕೊಂಡ್ರು!

ಏನೇ ಅನ್ನಿ, ಕೊರೋನಾ ನಮ್ಮ ಲೈಫ್‌ಸ್ಟೈಲ್‌ನ್ನೇ ಬದಲಾಯಿಸಿಬಿಟ್ಟಿದೆ. ಪಿಜ್ಜಾ, ಬರ್ಗರ್ ತಿನ್ನುತ್ತಿದ್ದವರು ಮುದ್ದೆ ಬಸ್ಸಾರಿನ ಮೊರೆ ಹೋಗಿದ್ದಾರೆ. ಆರೋಗ್ಯದ ಬಗ್ಗೆ ಹಿಂದೆಂದೂ ಮಾಡದಷ್ಟು ಕಾಳಜಿ ಇದೀಗ ಮಾಡುತ್ತಿದ್ದಾರೆ. ಅಂಗಡಿಗೆ ತರಕಾರಿ ತರೋಕೆ ಕ್ಯೂನಲ್ಲಿ ನಿಲ್ಲಬೇಕಾದ ಕಷ್ಟ ಅರಿತಿದ್ದಾರೆ. ಕ್ಯೂನಲ್ಲಿ ನಿಂತು ತಂದ ತರಕಾರಿಯನ್ನೂ ಅನುಮಾನ ದೃಷ್ಟಿಯಿಂದ ನೋಡಿದ್ದಾರೆ. ಆದರೆ ಇದಕ್ಕೆ ಆಲ್ಟರ್‌ನೇಟಿವ್ ಏನಿದೆ? ನಾವೇ ತರಕಾರಿ ಬೆಳೆದುಕೊಂಡು ತಿನ್ನಬೇಕಷ್ಟೆ. ಸರಿ ಬೆಳೆಯೋಕೆ ಮನಸ್ಸು ಮಾಡಿದರೂ ಮನೆ ಮುಂದೆ ಜಾಗ ಎಲ್ಲಿದೆ? ಮನೆ ಮುಂದೆಯೇ ಏಕೆ ಜಾಗ ಬೇಕು? ಮನೆ ಮೇಲೆಯೂ ಜಾಗ ಇದೆಯಲ್ವಾ? ನೀವೇ ಈ ರೀತಿ ಯೋಚನೆ ಮಾಡಿಲ್ಲದಿರಬಹುದು, ಬೆಂಗಳೂರಿನ ಜಿನ್ಸಿ, ಸ್ಯಾಮುಯೆಲ್ ದಂಪತಿ ಈ ಬಗ್ಗೆ ಯೋಚನೆ ಮಾಡಿದ್ದಾರೆ. ಯೋಚನೆ ಅಷ್ಟೇ ಅಲ್ಲ, ಕಾರ್ಯರೂಪಕ್ಕೂ ತಂದಿದ್ದಾರೆ.. ಅವರ ಸಕ್ಸಸ್‌ಫುಲ್ ಸ್ಟೋರಿ ಇಲ್ಲಿದೆ..

ಹೌದು..ಲಾಕ್ ಡೌನ್ ಸಮಯದಲ್ಲಿ ಕಿರಾಣಿ ಅಂಗಡಿಗಳ ಮುಂದೆ ಕ್ಯೂ ನಿಂತು ದಣಿದ ಜಿನ್ಸಿ ಸ್ಯಾಮ್ಯುಯೆಲ್ ದಂಪತಿ 500 ಚದರ ಅಡಿಯ ತಮ್ಮ ಟೆರೆಸ್ ಮೇಲೆ 250ಕ್ಕೂ ಹೆಚ್ಚು ಬಗೆಯ ಹಣ್ಣುಗಳು, ತರಕಾರಿಗಳು, ಔಷಧಿ ಸಸ್ಯಗಳನ್ನು ಬೆಳೆಯುತ್ತಿದ್ದಾರೆ. ಅಷ್ಟೇ ಅಲ್ಲದೆ ಸೀಗಡಿಗಳು ಮತ್ತು ಟಿಲಾಪಿಯಾ ಮೀನುಗಳನ್ನು ಸಹ ತಮ್ಮ ಆಹಾರಕ್ಕಾಗಿ ಸಾಕುತ್ತಿದ್ದಾರೆ.

hydroponics aquaponics urban gardening

ಇಷ್ಟು ಸಣ್ಣ ಟೆರೆಸ್ ಮೇಲೆ ಬಗೆ-ಬಗೆಯ ಕೃಷಿ ಮಾಡಿದ್ದಾರೆ ಎಂದರೆ ಅವರು ಕೃಷಿಯಲ್ಲಿ ಪರಿಣಿತರಿರಬಹುದು ಅಂಥ ಯೋಚಿಸಬೇಡಿ. ಏಕೆಂದರೆ ಜಿನ್ಸಿ ಓದಿದ್ದು ಎಂಬಿಎ. ಕ್ರಿಪ್ಟೋಕರೆನ್ಸಿ ಪ್ಲಾಟ್‌ಫಾರ್ಮ್‌ನ ಬಿಪಿಓನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಪತಿ ಬೆನ್ಸನ್ ಸ್ಯಾಮ್ಯುಯೆಲ್ ಕೂಡ ತಂತ್ರಜ್ಞಾನ ಉದ್ಯಮಿ.

ನಾನು, ನನ್ನ ಪತಿ, ಹಾಗೂ ಅತ್ತೆಗೆ ಮೊದಲಿನಿಂದಲೂ ತೋಟಗಾರಿಕೆ ಮಾಡುವ ಕನಸಿತ್ತು. ಆದರೆ ಕಾಲ ಕೈಗೂಡಿರಲಿಲ್ಲ. ಲಾಕ್ ಡೌನ್ ನನ್ನೇ ಒಂದು ಅವಕಾಶ, ಸವಾಲಾಗಿ ಸ್ವೀಕರಿಸಿದ ನಾವು ನಮ್ಮ ಕನಸನ್ನು ನನಸಾಗಿಸಿದ್ದೇವೆ ಎನ್ನುತ್ತಾರೆ ಜಿನ್ಸಿ.

hydroponics aquaponics urban gardening

500 ಚದರ ಅಡಿಯ ತಮ್ಮ ಟೆರೆಸ್ ನ ಮೇಲೆ ಹೈಡ್ರೋಪೋನಿಕ್ ಮತ್ತು ಅಕ್ವಾಪೋನಿಕ್ ವ್ಯವಸ್ಥೆಯನ್ನು ಮಾಡಿಕೊಂಡು ಔಷಧಿ ಗಿಡಗಳು, ಕ್ಯಾರೆಟ್, ಬದನೆಕಾಯಿ, ಟೋಮಾಟೋ, ಚೆರ್ರಿ, ಪಾಲಕ್, ಮೂಲಂಗಿ, ಕೊತ್ತಂಬರಿ ಸೊಪ್ಪು, ಪೇರಲೆ ಸೇರಿದಂತೆ 250ಕ್ಕೂ ಹೆಚ್ಚು ತರಕಾರಿ ಮತ್ತು ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ಸೀಗಡಿ, ಟಿಲಾಪಿಯಾದಂತಹ ಮೀನುಗಳಂತಹ ಜಲಚರ ಪ್ರಾಣಿಗಳನ್ನೂ ಸಹ ಆಹಾರಕ್ಕಾಗಿ ಸಾಕುತ್ತಿದ್ದಾರೆ.

hydroponics aquaponics urban gardening

ಇಡೀ ಟೆರೆಸ್ ಪಾಲಿಹೌಸ್ ವ್ಯವಸ್ಥೆ ಹೊಂದಿರುವುದರಿಂದ ಸಸ್ಯಗಳ ಮೇಲೆ ಯಾವುದೇ ಕೀಟಗಳು ದಾಳಿ ಮಾಡುವುದಿಲ್ಲ. ಮತ್ತು ಬೆಳೆ ಬೇಗ ಬೆಳೆಯಬಹುದಾಗಿದೆ.

ನಾನು ಬೆನ್ಸನ್ ಅವರನ್ನು ಮದುವೆಯಾಗಿ 13 ವರ್ಷವಾಗಿದೆ. ಅವರು ಪಕ್ಕಾ ಮಾಂಸಾಹಾರಿಯಾಗಿದ್ದರು. ಆದರೆ ನಾವು ತರಕಾರಿಗಳನ್ನು ಬೆಳೆಯಲು ಪ್ರಾರಂಭಿಸಿದ ಮೇಲಿನಿಂದ ಅವರೂ ಕೂಡ ಸಸ್ಯಾಹಾರಿಯಾದ್ದಾರೆ. ಇದು ನನಗೆ ಬಹಳ ಖುಷಿ ವಿಷಯ ಎಂದು ಜಿನ್ಸಿ ಹೇಳುತ್ತಾರೆ.

hydroponics aquaponics urban gardening

ಜೆನ್ಸಿ ತಮ್ಮ ಟೆರೆಸ್ ಕೃಷಿಯಿಂದ ತಿಂಗಳಿಗೆ 3,000 ದಿಂದ 4000 ವರಗೆ ಹಣ ಸಂಪಾದಿಸುತ್ತಿದ್ದಾರೆ. ನೆರೆ ಹೊರೆಯವರಿಗೆ ತಾವು ಬೆಳೆದ ತರಕಾರಿ, ಹಣ್ಣುಗಳು ಫ್ರೀಯಾಗಿ ನೀಡುತ್ತಾರೆ. ಅಷ್ಟೇ ಅಲ್ಲದೆ ಟೆರೆಸ್ ಕೃಷಿಯ ಬಗ್ಗೆ ತರಬೇತಿ ನೀಡುತ್ತಿದ್ದಾರೆ. ಒಟ್ಟಿನಲ್ಲಿ ಕಾಂಕ್ರಿಟ್ ಕಾಡಿನಲ್ಲಿ ಜೆನ್ಸಿ ಮನೆಯ ಟೆರೆಸ್ ಉದ್ಯಾನವನದಂತೆ ಕಾಣುತ್ತಿರುವುದಂತು ಸತ್ಯ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss