Sunday, February 28, 2021

Latest Posts

ಇಂಧನ ಬೆಲೆ ಜಿಎಸ್‌ಟಿಯಲ್ಲಿ ಸೇರಿಸಲು ಕೇಂದ್ರ ಸರಕಾರಕ್ಕೆ ಶಿಫಾರಸಿಗೆ ಬಿಎಂಎಸ್ ಒತ್ತಾಯ

ಹೊಸದಿಗಂತ ವರದಿ, ಕಾಸರಗೋಡು:

ಪೆಟ್ರೋಲ್, ಡೀಸೆಲ್ ದರ ಪದೇ ಪದೇ ಹೆಚ್ಚಿಸಬೇಕಾಗಿ ಬರುತ್ತಿರುವ ಹಿನ್ನೆಲೆಯಲ್ಲಿ ಇಂಧನ ದರವನ್ನು ಜಿಎಸ್‌ಟಿಯಲ್ಲಿ ಒಳಪಡಿಸಬೇಕೆಂದು ರಾಜ್ಯ ಸರಕಾರವು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಬೇಕೆಂದು ಆಟೋರಿಕ್ಷಾ ಮಜ್ದೂರ್ ಸಂಘ ಮುಳಿಯಾರು ಘಟಕ ಸಮ್ಮೇಳನವು ಒತ್ತಾಯಿಸಿದೆ.
ಬೋವಿಕ್ಕಾನದಲ್ಲಿ ನಡೆದ ಕಾರ್ಯಕ್ರಮವನ್ನು ಬಿಎಂಎಸ್ ನೇತಾರ ಎಂ.ಕೆ.ರಾಘವನ್ ಉದ್ಘಾಟಿಸಿದರು. ಮೋಟಾರು ಕಾರ್ಮಿಕರ ಸಂಘದ ಮುಳಿಯಾರು ಪಂಚಾಯತ್ ಸಮಿತಿಯ ಉಪಾಧ್ಯಕ್ಷ ರಾಧಾಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಜೊತೆ ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ , ವಲಯ ಅಧ್ಯಕ್ಷ ಸದಾಶಿವ ಮುಳ್ಳೇರಿಯ ಮಾತನಾಡಿದರು.
ಬಿಎಂಎಸ್ ಮುಳಿಯಾರು ಪಂಚಾಯತ್ ಸಮಿತಿಯ ಅಧ್ಯಕ್ಷ ಆನಂದ ಸಿ.ಎಚ್. ಸ್ವಾಗತಿಸಿ, ಕಾರ್ಯದರ್ಶಿ ಅಕ್ಷಯ್ ವಂದಿಸಿದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!