Wednesday, July 6, 2022

Latest Posts

ಮುಷ್ಕರ ನಿರತ ಸಾರಿಗೆ ನೌಕರರಿಗೆ ಬಿಎಂಟಿಸಿ ಶಾಕ್‌: ಇಂದು ಮತ್ತೆ 60 ತರಬೇತಿ, 58 ಪ್ರೊಬೇಷನರಿ ಸಿಬ್ಬಂದಿಗಳು ವಜಾ

ಹೊಸದಿಗಂತ ಆನ್ ಲೈನ್ ಡೆಸ್ಕ್:

6ನೇ ವೇತನ ಆಯೋಗದ ಜಾರಿಗಾಗಿ ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕರರಿಗೆ ಬಿಎಂಟಿಸಿ ಶಾಕ್‌ ಮೇಲೆ ಶಾಕ್‌ ನೀಡ್ತಿದ್ದು, ಇಂದು ಕೂಡ 60 ತರಬೇತಿ ನೌಕರರು, 58 ಪ್ರೊಬೇಷನರಿ ಸಿಬ್ಬಂದಿಗಳನ್ನುಸೇವೆಯಿಂದ ವಜಾಗೊಳಿಸಿದೆ.
ಕೆಲವು ತರಬೇತಿ ಮತ್ತು ಪ್ರೊಬೇಷನರಿ ಉದ್ಯೋಗಿಗಳಿಗೆ 7.04.2021 ಮತ್ತು 08.04.2021 ರಂದು ಹೊರಡಿಸಲಾದ ಬಿಎಂಟಿಸಿ ಪೇಪರ್ ಅಧಿಸೂಚನೆಯನ್ನ ಉಲ್ಲೇಖಿಸಿ, 60 ತರಬೇತಿ ನೌಕರರು ಮತ್ತು 58 ಪ್ರೊಬೇಷನರಿ ಉದ್ಯೋಗಿಗಳನ್ನು ಇಂದು ಅವರ ಸೇವೆಯಿಂದ ವಜಾ ಮಾಡಲಾಗಿದೆ ಎಂದು ಬಿಎಂಟಿಸಿ ತಿಳಿಸಿದೆ.
ನಿನ್ನೆಯೂ ಕೂಡ 60 ತರಬೇತಿ ನೌಕರರು ಮತ್ತು 60 ಪ್ರೊಬೇಷನರಿ ಉದ್ಯೋಗಿಗಳನ್ನ ಸೇವೆಯಿಂದ ವಜಾಗೊಳಿಸಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss