Saturday, June 25, 2022

Latest Posts

ಸೋಮವಾರದಿಂದ ಮತ್ತೆ ಓಡಾಡಲಿದೆ BMTC!

ಹೊಸದಿಗಂತ ಆನ್ ಲೈನ್ ಡೆಸ್ಕ್:

6ನೇ ವೇತನ ಆಯೋಗವನ್ನು ಜಾರಿ ಮಾಡುವಂತೆ ಸಾರಿಗೆ ನೌಕರರು ಮುಷ್ಕರ ಮಾಡುತ್ತಿರುವ ಹಿನ್ನೆಲೆಯಲ್ಲಿ ನಿವೃತ್ತಿ ಹೊಂದಿರುವ ಚಾಲಕರು ಬಸ್​ ಚಲಾಯಿಸಲು ಮುಂದೆ ಬಂದಿದ್ದಾರೆ ಎಂದು ಬಿಎಂಟಿಸಿ ಭದ್ರತಾ ವಿಭಾಗದ ನಿರ್ದೇಶಕರಾದ ಡಾ ಅರುಣ್​ ತಿಳಿಸಿದ್ದಾರೆ.
ನಾವು ಬಸ್​ ಓಡಿಸಲು ರೆಡಿ ಇದ್ದೇವೆ ನಮಗೆ ಅವಕಾಶ ಕೊಡಿ ಎಂದು ನಿವೃತ್ತಿ ನೌಕರರ ಸಂಘ ಬಿಎಂಟಿಸಿಗೆ ಮನವಿ ಮಾಡಿದೆ. ಅವರು ಎಷ್ಟು ಜನ ಇದ್ದಾರೆಂದು ಮಾಹಿತಿ ನೀಡಲಿದ್ದಾರೆ, ನಾವು ಎಲ್ಲವನ್ನೂ ಪರಿಗಣಿಸಿ ಸೋಮವಾರ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಸಾರಿಗೆ ನೌಕರರು ಕಳೆದ 10ದಿನಗಳಿಂದ ಮುಷ್ಕರ ನಡೆಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss