Saturday, July 2, 2022

Latest Posts

ದೋಣಿ ಅಪಘಾತ: 42 ವಲಸೆ ಪ್ರಯಾಣಿಕರ ಸಾವು, 16 ಮಕ್ಕಳ ಮೃತದೇಹ ಪತ್ತೆ

ಹೊಸದಿಗಂತ ಆನ್ ಲೈನ್ ಡೆಸ್ಕ್:

ದೋಣಿಯೊಂದು ಅಪಘಾತಕ್ಕೀಡಾಗಿ ಅದರಲ್ಲಿ ಪ್ರಯಾಣಿಸುತ್ತಿದ್ದ 42 ಮಂದಿ ವಲಸಿಗರು ಸಾವನ್ನಪ್ಪಿರುವ ಘಟನೆ ಪೂರ್ವ ಆಫ್ರಿಕಾದ ಜಿಬೌಟಿ ತೀರದಲ್ಲಿ ನಡೆದಿದೆ.
ಸೋಮವಾರ ಮುಂಜಾನೆ ಯೆಮೆನ್ ನಿಂದ ಡಿಬೌಟಿಗೆ ವಲಸಿಗರು ಪ್ರಯಾಣ ಮಾಡುತ್ತಿದ್ದರು ಎನ್ನಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಹಾರ್ನ್ ಆಫ್ ಆಫ್ರಿಕಾದ ಮೊಹಮ್ಮದ್ ಅಬ್ಡಿಕರ್ ಅವರು, ದೋಣಿ ದುರಂತದಲ್ಲಿ ಮೃತಪಟ್ಟವವರಲ್ಲಿ 16 ಮಂದಿ ಮಕ್ಕಳ ಮೃತದೇಹ ತೀರಕ್ಕೆ ತೇಲಿ ಬಂದಿದೆ. ಅದರಲ್ಲಿ 8 ಗಂಡು, 8 ಹೆಣ್ಣು ಮಕ್ಕಳಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ವಲಸಿಗರನ್ನು ಮಾನವ ಕಳ್ಳಸಾಗಾಣೆದಾರರು ಕರೆದೊಯ್ಯುತ್ತಿದ್ದರೇ ಎಂಬ ಶಂಕೆ ವ್ಯಕ್ತವಾಗಿದೆ.
ಪೊಲೀಸರು ತನಿಖೆ ನಡೆಸುತ್ತಿದ್ದು, ಉಳಿದ ಮೃತದೇಹಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss