ಬಾಂಗ್ಲಾದೇಶದಲ್ಲಿ ಮುಳುಗಿದ ದೋಣಿ: 24 ಮಂದಿ ಸಾವು, ಹಲವರು ನಾಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಂಗ್ಲಾದೇಶದಲ್ಲಿ ಪ್ರಯಾಣಿಕರಿಂದ ತುಂಬಿದ ದೋಣಿ ಮುಳುಗಿ ಬರೋಬ್ಬರಿ 24 ಜನರು ಸಾವನ್ನಪ್ಪಿದ್ದು, 12ಕ್ಕೂ ಅನೇಕ ಜನರು ಕಾಣೆಯಾಗಿರುವ ಘಟನೆ ನಡೆದಿದೆ.
ನಾಪತ್ತೆಯಾದವರ ಪತ್ತೆಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅ ಉತ್ತರ ಪಂಚಗಢದ ಜಿಲ್ಲಾ ಆಡಳಿತಾಧಿಕಾರಿ ಜಹುರುಲ್ ಇಸ್ಲಾಂ ಹೇಳಿದ್ದಾರೆ.
ಕಾಣೆಯಾದವರ ನಿಖರ ಸಂಖ್ಯೆ ತಿಳಿದಿಲ್ಲ. ಆದರೆ ಇಲ್ಲಿಯವರೆಗೆ ಪತ್ತೆಯಾದ ಶವಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ಪ್ರಯಾಣಿಕರು 70 ಕ್ಕೂ ಹೆಚ್ಚು ಜನರು ದೋಣಿದಲ್ಲಿದ್ದರು ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!