ಸಮುದ್ರದ ದಡದಲ್ಲಿ ನಿಲ್ಲಿಸಿದ ಬೋಟ್‌ಗಳು ಬೆಂಕಿಗಾಹುತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂಗಳೂರಿನ ಕಸಬಾ ಬೆಂಗರೆ ಪ್ರದೇಶದಲ್ಲಿ ಸಮುದ್ರದ ದಡದ ಬಳಿ ನಿಲ್ಲಿಸಲಾಗಿದ್ದ ಎರಡು ಬೋಟ್‌ಗಳು ಬೆಂಕಿಗಾಹುತಿಯಾದ ಘಟನೆ ನಡೆದಿದೆ.
ಮೂರು ಬೋಟ್‌ಗಳನ್ನು ನಿಲ್ಲಿಸಲಾಗಿದ್ದು, ಈ ಪೈಕಿ ಎರಡು ಬೋಟ್‌ಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಬೋಟ್‌ಗಳು ಸಂಪೂರ್ಣವಾಗಿ ಸುಟ್ಟು ಹೋಗಿದೆ.
ಡಿಯೂ ಡಮನ್‌ನಂತಹ ದ್ವೀಪ ಪ್ರದೇಶಕ್ಕೆ ಸರಕು ಸಾಮಾಗ್ರಿಗಳನ್ನು ಕೊಂಡೊಯ್ಯಲು ಈ ಬೋಟ್‌ಗಳನ್ನು ಬಳಸಲಾಗುತ್ತಿತ್ತು. ರಿಪೇರಿಗೆಂದು ನಿಲ್ಲಿಸಲಾಗಿತ್ತು.
ದಿಡೀರ್ ಬೋಟ್‌ಗಳು ಬೆಂಕಿಗಾಹುತಿಯಾದ್ದರಿಂದ ಇಡೀ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿತ್ತು. ಅಗ್ನಿಶಾಮಕ ದಳ ಕೂಡಲೇ ಸ್ಥಳಕ್ಕಾಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಬೋಟ್‌ಗಳಿಗೆ ಬೆಂಕಿ ಹತ್ತಿಕೊಳ್ಳಲು ಕಾರಣವೇನೆಂದು ತಿಳಿದುಬಂದಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!