2,000 ಉದ್ಯೋಗಿಗಳನ್ನು ಮನೆಗೆ ಕಳಿಸಲಿದೆ ಬೋಯಿಂಗ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವಿಮಾನ ತಯಾರಿಕೆಯಲ್ಲಿ ಜಗತ್ತಿನಾದ್ಯಂತ ಹೆಸರುಗಳಿಸುವ ಕಂಪನಿ ಬೋಯಿಂಗ್‌ ತನ್ನ 2,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಹೇಳಿದೆ. ಜಾಗತಿಕ ಆರ್ಥಿಕ ಅನಿಶ್ಚಿತತೆಗಳು ಕಂಪನಿಯನ್ನು ಪ್ರಭಾವಿಸಿದ್ದು ಹಣಕಾಸು ಮತ್ತು ಮಾನವ ಸಂಪನ್ಮೂಲದಲ್ಲಿ ಸುಮಾರು 2,000 ಜನರಿಗೆ ಪಿಂಕ್‌ ಸ್ಲಿಪ್‌ ನೀಡುವುದಾಗಿ ಕಂಪನಿ ಘೋಷಿಸಿದೆ.

ಈ ಹಿಂದೆ ಕಂಪನಿಯು 2023ರಲ್ಲಿ 10,000 ಉದ್ಯೋಗಿಗಳನ್ನು ನೇಮಿಸಿಕೊಳ್ಳುವುದಾಗಿ ಹೇಳಿತ್ತು. ಆದರೆ ಈಗ ಉದ್ಯೋಗ ಕಡಿತವನ್ನು ವರ್ಜೀನಿಯಾ ಮೂಲದ ಕಂಪನಿ ಬೋಯಿಂಗ್‌ ಘೋಷಿಸಿದ್ದು ʼಕೆಲವು ಬೆಂಬಲ ಕೆಲಸಗಳಲ್ಲಿ ಸಿಬ್ಬಂದಿಗಳನ್ನು ಕಡಿಮೆ ಮಾಡುವುದಾಗಿ ಹೇಳಿದೆ. ಉಳಿದಂತೆ ತಂತ್ರಜ್ಞಾನದ ಅಭಿವೃದ್ಧಿಯನ್ನು ಬೆಂಬಲಿಸಲು ಅದು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದೆ. ಅಲ್ಲದೇ ಭಾರತದ ಟಾಟಾ ಕನ್ಸಲ್ಟಿಂಗ್ ಸರ್ವಿಸಸ್‌ಗೆ ಆ ಉದ್ಯೋಗಗಳಲ್ಲಿ ಮೂರನೇ ಒಂದು ಭಾಗವನ್ನು ಹೊರಗುತ್ತಿಗೆ ನೀಡುತ್ತಿದೆ ಎಂದು ಬೋಯಿಂಗ್ ದೃಢಪಡಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!