Sunday, April 18, 2021

Latest Posts

ಸಿಮೆಂಟ್ ಚೀಲ ಸಾಗಿಸುತ್ತಿದ್ದ ಬೊಲೇರೊ ಪಲ್ಟಿ: ಕಾರ್ಮಿಕರಿಬ್ಬರು ಸ್ಥಳದಲ್ಲೇ ಸಾವು

ಹೊಸ ದಿಗಂತ ವರದಿ ವಿಜಯಪುರ:

ಸಿಮೆಂಟ್ ಚೀಲ ಸಾಗಿಸುತ್ತಿದ್ದ ಬೊಲೇರೊ ವಾಹನ ಪಲ್ಟಿಯಾಗಿ ಕಾರ್ಮಿಕರಿಬ್ಬರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನೇಬಗೇರಿ ಹತ್ತಿರ ನಡೆದಿದೆ.

ಮೃತಪಟ್ಟವರನ್ನು ಗೆದ್ದಲಮರಿ ತಾಂಡಾದ ವೆಂಕಟೇಶ ಪವಾರ (40), ಢವಳಗಿಯ ನಾಗಪ್ಪ ಸಂಗಪ್ಪ ದಂಡೆನ್ನವರ (45) ಎಂದು ಗುರುತಿಸಲಾಗಿದೆ.

ಈ ಕಾರ್ಮಿಕರು ಬೊಲೇರೊ ವಾಹನದಲ್ಲಿ ತೆರಳುತ್ತಿದ್ದಾಗ, ವಾಹನ ಪಲ್ಟಿಯಾಗಿದ್ದು, ಇಬ್ಬರಿಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲಿ ಅಸುನೀಗಿದರೆ, ಇನ್ನಿಬ್ಬರು ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆಗೆ ತಾಲೂಕಾಸ್ಪತ್ರೆಗೆ ಸಾಗಿಸಲಾಗಿದೆ.

ಮುದ್ದೇಬಿಹಾಳ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದರು. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss