Monday, July 4, 2022

Latest Posts

ಅಮೇಜಾನ್​ ಕಾಡಿನಲ್ಲಿ ಬೊಲಿವಿಯಾ ವಾಯುಪಡೆಯ ವಿಮಾನ ಪತನ: ಆರು ಮಂದಿ ದುರ್ಮರಣ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಅಮೇಜಾನ್​ ಅರಣ್ಯದಲ್ಲಿ  ಈಶಾನ್ಯ ಬೊಲಿವಿಯಾದ ವಾಯುಪಡೆಯ ವಿಮಾನವೊಂದು ಪತನವಾಗಿದ್ದು, ಆರು ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದಕ್ಷಿಣ ಅಮೆರಿಕಾದ ಬೊಲಿವಿಯಾದ ಈಶಾನ್ಯದಲ್ಲಿರುವ ಬೆನಿ ಪ್ರದೇಶದ ಅಮೇಜಾನ್​ ಕಾಡಿನಲ್ಲಿ  ಈ ದುರಂತ ನಡೆದಿದೆ. ಇಬ್ಬರು ಸೇನಾ ಪೈಲಟ್​​ಗಳು, ನಾಲ್ವರು ನಾಗರಿಕರು ಮೃತಪಟ್ಟಿದ್ದಾರೆ.

ವಿಮಾನವು ಮರಗಳ ಮಧ್ಯೆ ಪತನವಾಗಿದ್ದು, ಪತನದ ರಭಸಕ್ಕೆ ಬೆಂಕಿ ಹೊತ್ತಿಕೊಂಡು ಇಡೀ ವಿಮಾನ ಸುಟ್ಟು ಕರಕಲಾಗಿದೆ ಎಂದು ಬೆನಿ ಪ್ರದೇಶದ ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ವಿಮಾನ ಬೊಲಿವಿಯಾದ ಆರೋಗ್ಯ ಸಚಿವಾಲಯದ ಡೆಂಗ್ಯೂ, ಚಿಕನ್ ಗುನ್ಯಾ ಕಾರ್ಯಕ್ರಮದ ನಾಲ್ವರು ಅಧಿಕಾರಿಗಳನ್ನು ಕರೆದೊಯ್ಯುತ್ತಿತ್ತು. ನಾಲ್ವರೂ ಅಧಿಕಾರಿಗಳು ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss