ಬಾಲಿವುಡ್ ಹಿರಿಯ ನಟ ಸತೀಶ್ ಕೌಶಿಕ್ ಇನ್ನಿಲ್ಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್ :

ಬಾಲಿವುಡ್‌ ಹಿರಿಯ ನಟ ಮತ್ತು ನಿರ್ದೇಶಕ ಸತೀಶ್ ಕೌಶಿಕ್(66) ‌ ಮುಂಬೈನಲ್ಲಿ ಬುಧವಾರ ರಾತ್ರಿ ನಿಧನರಾಗಿದ್ದಾರೆ.

ಸತೀಶ್ ಕೌಶಿಕ್ ಅವರೊಂದಿಗೆ ಉತ್ತಮ ಸ್ನೇಹವನ್ನು ಹೊಂದಿದ್ದ ಹಿರಿಯ ನಟ ಅನುಪಮ್ ಖೇರ್, ಕೌಶಿಕ್‌ ಅವರ ನಿಧನ ಸುದ್ದಿಯನ್ನು ಟ್ವಿಟರ್‌ನಲ್ಲಿ ಖಚಿತಪಡಿಸಿದ್ದಾರೆ.

ನಟ ಅನುಪಮ್ ಖೇರ್ ಟ್ವಿಟ್ಟರ್‌ ಖಾತೆಯಲ್ಲಿ,‘ನನಗೆ ಗೊತ್ತು ಸಾವು ಈ ಜಗತ್ತಿನ ಪರಮ ಸತ್ಯ. ನಾನು ಬದುಕಿರುವಾಗ ನನ್ನ ಆತ್ಮೀಯ ಗೆಳೆಯ ಸತೀಶ್ ಕೌಶಿಕ್ ಬಗ್ಗೆ ಈ ವಿಷಯ ಬರೆಯುತ್ತೇನೆ ಎಂದು ನಾನು ನನ್ನ ಕನಸಿನಲ್ಲೂ ಯೋಚಿಸಿರಲಿಲ್ಲ. 45 ವರ್ಷಗಳ ಸ್ನೇಹಕ್ಕೆ ಇದ್ದಕ್ಕಿದ್ದಂತೆ ಪೂರ್ಣ ವಿರಾಮ. ನೀನಿಲ್ಲದೆ ನನ್ನ ಜೀವನ ಎಂದಿಗೂ ಮೊದಲಿನಂತೆ ಆಗುವುದಿಲ್ಲ ಸತೀಶ್. ಓಂ ಶಾಂತಿ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಅನುಪಮ್ ಖೇರ್​ನ ಟ್ವೀಟ್​ ಅನ್ನು ಟ್ವಿಟ್ಟಿಗರು ಶೇರ್ ಮಾಡಿಕೊಂಡು ಸಂತಾಪ ಸೂಚಿಸುತ್ತಿದ್ದಾರೆ. ಗೆಳೆಯನನ್ನು ಕಳೆದುಕೊಂಡ ಅನುಪಮ್​​ಗೆ ಫ್ಯಾನ್ಸ್ ಕಡೆಯಿಂದ ಧೈರ್ಯ ತುಂಬುವ ಪ್ರಯತ್ನ ಮುಂದುವರೆದಿದೆ.

ಮಿಸ್ಟರ್‌ ಇಂಡಿಯಾ ಚಿತ್ರದಲ್ಲಿ‘ಕ್ಯಾಲೆಂಡರ್’ ಪಾತ್ರ ಮತ್ತು ‘ದೀವಾನಾ ಮಸ್ತಾನಾ’ದಲ್ಲಿ ‘ಪಪ್ಪು ಪೇಜರ್’ ಪಾತ್ರಗಳಿಂದಲೇ ಸತೀಶ್ ಕೌಶಿಕ್ ಹೆಚ್ಚು ಜನಪ್ರಿಯತೆಯನ್ನು ಪಡೆದಿದ್ದರು. ಅತ್ಯುತ್ತಮ ಹಾಸ್ಯನಟನೆಗಾಗಿ ಸತೀಶ್ ಕೌಶಿಕ್ ಎರಡು ಬಾರಿ ಫಿಲ್ಮ್ ಫೇರ್ ಪ್ರಶಸ್ತಿಗೆ ಭಜನರಾಗಿದ್ದಾರೆ.

ಸತೀಶ್ ಕೌಶಿಕ್ ಇಂದು ಅವರ ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!