ಹೊಸದಿಗಂತ ಡಿಜಿಟಲ್ ಡೆಸ್ಕ್ :
ಹಿರಿಯ ಬಾಲಿವುಡ್ ನಟ ಜಾವೇದ್ ಖಾನ್ ಅಮ್ರೋಹಿ (50) ನಿಧನರಾಗಿದ್ದಾರೆ.
ಬಾಲಿವುಡ್‌ನ ಮೆಗಾ ಹಿಟ್ ಚಿತ್ರಗಳಾದ, ಅಂದಾಜ್ ಅಪ್ನಾ ಅಪ್ನಾ, ಲಗಾನ್, ಇಷ್ಕ್, ಹಮ್ ಹೇ ರಾಹಿ ಪ್ಯಾರ್ ಕೇ ಹಾಗೂ ಚಕ್ ದೇ ಇಂಡಿಯಾದಂಥ ಚಿತ್ರಗಳಲ್ಲಿ ನಟಿಸಿದ್ದರು.
ಜಾವೇದ್ ಖಾನ್, ಇತ್ತೀಚಿನ ಯುಗದ ಜನತೆಗೆ, ಲಗಾನ್ ಚಿತ್ರದ ‘ಹಮ್ ಜೀತ್ ಗಯೇ..’ ಡೈಲಾಗ್‌ನ ಮೀಮ್ಸ್‌ನಿಂದಲೇ ಪ್ರಸಿದ್ಧಿ ಪಡೆದುಕೊಂಡಿದ್ದರು.
ಜಾವೇದ್ ಖಾನ್ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು ಮತ್ತು ಕಳೆದ ಒಂದು ವರ್ಷದಿಂದ ಹಾಸಿಗೆ ಹಿಡಿದಿದ್ದರು. ಅವರನ್ನು ಸಾಂತಾಕ್ರೂಜ್‌ನ ಸೂರ್ಯ ನರ್ಸಿಂಗ್ ಹೋಮ್‌ಗೆ ದಾಖಲಿಸಲಾಗಿತ್ತು. ಅಲ್ಲಿಯೇ ಅವರು ಕೊನೆಯುಸಿರೆಳೆದಿದ್ದಾರೆ.
ಅವರು ಕೊನೆಯದಾಗಿ ಸಂಜಯ್ ದತ್, ಆದಿತ್ಯ ರಾಯ್ ಕಪೂರ್, ಆಲಿಯಾ ಭಟ್ ಮತ್ತು ಪೂಜಾ ಭಟ್ ಅಭಿನಯಿಸಿದ್ದ ‘ಸಡಕ್ 2’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.