ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ಲೈನ್ ಡೆಸ್ಕ್:
ಇತ್ತೀಚೆಗಷ್ಟೇ ಬಾಲಿವುಡ್ ನಟ ರಜತ್ ಬೇಡಿ ಕಾರು ಪಾದಚಾರಿಗೆ ಡಿಕ್ಕಿಯಾಗಿತ್ತು.
ಪಾದಚಾರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ ಪಾದಚಾರಿ ರಾಜೇಶ್ ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ರಜತ್ ಬೇಡಿ ಮೇಲೆ ಕೇಸ್ ದಾಖಲಾಗಿದ್ದು, ಅವರಿಂದ ಸೂಕ್ತ ನೆರವು ಸಿಕ್ಕಿಲ್ಲ ಎಂದು ಕುಟುಂಬಸ್ತರು ಆರೋಪಿಸಿದ್ದಾರೆ.
40 ವರ್ಷದ ರಾಜೇಶ್ಗೆ ರಜತ್ ಬೇಡಿ ಕಾರು ಡಿಕ್ಕಿಯಾಗಿತ್ತು. ರಜತ್ ರಾಜೇಶ್ನನ್ನು ಕೂಪರ್ ಆಸ್ಪತ್ರೆಗೆ ದಾಖಲಿಸಿದ್ದರು. ತಲೆಗೆ ತೀವ್ರ ಪೆಟ್ಟು ಬಿದ್ದು, ಐಸಿಯುನಲ್ಲಿ ರಾಜೇಶ್ ಚಿಕಿತ್ಸೆ ಪಡೆಯುತ್ತಿದ್ದರು.
ನಾನು ನೆರವು ನೀಡುತ್ತೇನೆ, ಚಿಕಿತ್ಸಾ ವೆಚ್ಚ ಭರಿಸುತ್ತೇನೆ ಎಂದು ರಜತ್ ಕುಟುಂಬದವರಿಗೆ ಹೇಳಿ ಆಸ್ಪತ್ರೆಯಿಂದ ಹೋದವರು ಮತ್ತೆ ಆಸ್ಪತ್ರೆ ಕಡೆ ಮುಖ ಮಾಡಿಲ್ಲ.
ಇದೀಗ ರಾಜೇಶ್ ಮಡದಿ, ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ. ದೂರು ದಾಖಲಿಸಿದರೂ ಪೊಲೀಸರು ರಜತ್ರನ್ನು ಬಂಧಿಸಿಲ್ಲ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಆದರೆ ರಾಜೇಶ್ ಮ್ಯಾನೇಜರ್ ಇದನ್ನು ಅಲ್ಲಗಳೆದಿದ್ದಾರೆ. ರಜತ್ ನಿಧಾನವಾಗಿ ಕಾರು ಓಡಿಸುತ್ತಿದ್ದರು. ಆದರೆ ರಾಜೇಶ್ ಗಾಡಿಗೆ ಅಡ್ಡ ಬಂದ. ಆತ ಸಿಕ್ಕಾಪಟ್ಟೆ ಕುಡಿದಿದ್ದ. ರಜತ್ ಅವರೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ ಎಂದು ಮ್ಯಾನೇಜರ್ ಹೇಳಿದ್ದಾರೆ.