Saturday, July 2, 2022

Latest Posts

ದೀಪಿಕಾರಂತೆ ಕ್ಯೂಟ್​ ಮಗು ಬೇಕೆಂದ ಬಾಲಿವುಡ್​ ನಟ ರಣವೀರ್​ ಸಿಂಗ್!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಬಾಲಿವುಡ್​ ನಟ ರಣವೀರ್​ ಸಿಂಗ್ ನಟಿ ದೀಪಿಕಾ ಪಡುಕೋಣೆ ಜೋಡಿ ಅತ್ಯಂತ ಜನಪ್ರಿಯವಾಗಿದೆ. ಎಲ್ಲಿ ಹೋದರು ಅವರ ಮಾತು ನಗು ಅಭಿಮಾನಿಗಳನ್ನು ಸೆಳೆಯುತ್ತದೆ. ಇದೀಗ ರಣವೀರ್​ ಸಿಂಗ್​ ತಮ್ಮ ಆಸೆಯನ್ನು ಹೇಳಿಕೊಂಡಿದ್ದಾರೆ. ಹೌದು, ಅಪ್ಪನಾಗುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ದೀಪಿಕಾ ಚಿಕ್ಕವರಿದ್ಧಾಗ ಇದ್ದಂತೆ ಕ್ಯೂಟ್​ ಆಗಿರುವ ಹೆಣ್ಣು ಮಗು ಆದರೆ ತಮ್ಮ ಲೈಫ್​ ಸೆಟ್​ ಆದಂತೆ ಎಂದು ಖುಷಿಯಿಂದ ಹೇಳಿದ್ದಾರೆ.
ಕಲರ್ಸ್​ ಟಿವಿಯಲ್ಲಿ ಹೊಸದಾಗಿ ಮೂಡಿಬರುತ್ತಿರುವ ‘ದ ಬಿಗ್ ಪಿಚ್ಚರ್​’ ಕ್ವಿಜ್​ ಶೋನ ಹೋಸ್ಟ್​ ಆಗಿ ರಣವೀರ್​ ಸಿಂಗ್​ , ಶನಿವಾರ ಆರಂಭವಾದ ಈ ಶೋನ ಪ್ರೋಮೋ ವಿಡಿಯೋದಲ್ಲಿ ಸ್ಟುಡಿಯೋ ಆಡಿಯನ್ಸ್​ ಜೊತೆ ಲೋಕಾಭಿರಾಮವಾಗಿ ಮಾತನಾಡುತ್ತಾ, ‘ನಿಮಗೆ ಗೊತ್ತಿರುವಂತೆ ನನಗೆ ಮದುವೆಯಾಗಿದೆ. ಕೆಲವೇ ವರ್ಷಗಳಲ್ಲಿ ನಮಗೂ ಮಕ್ಕಳಾಗುತ್ತವೆ’ ಎಂದು ನಾಚಿಕೊಂಡು ಹೇಳಿದ್ದಾರೆ.
‘ನಿಮ್ಮ ಭಾಬಿ(ದೀಪಿಕಾ)ಯ ಬೇಬಿ ಫೋಟೋಗಳನ್ನು ನೀವು ನೋಡಬೇಕು. ಎಷ್ಟು ಕ್ಯೂಟ್​ ಬೇಬಿ ಆಗಿದ್ದಳು. ಆ ತರಹದ ಕ್ಯೂಟ್ ಬೇಬಿ ಸಿಕ್ಕರೆ ನನ್ನ ಜೀವನ ಸೆಟ್​ ಆದಂತೆ’ ಎಂದಿರುವ ರಣವೀರ್​, ತಾವು ಮಗುವಿನ ಹೆಸರುಗಳ ಪಟ್ಟಿ ಮಾಡುತ್ತಿದ್ದು, ಕ್ವಿಜ್​ ಅಭ್ಯರ್ಥಿ ಹೇಳಿದ ‘ಶೌರ್ಯ ವೀರ್​ ಸಿಂಗ್​’ ಎಂಬ ಹೆಸರನ್ನು ಆ ಪಟ್ಟಿಗೆ ಸೇರಿಸಿಕೊಳ್ಳುವುದಾಗಿಯೂ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss