ಬಾಲಿವುಡ್​ ನಟ ಸುಶಾಂತ್ ಸಿಂಗ್ ಜನ್ಮದಿನ: ವಿಶೇಷ ಪೋಸ್ಟ್ ಹಂಚಿಕೊಂಡ ರಿಯಾ ಚಕ್ರವರ್ತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್​ ನಟ ಸುಶಾಂತ್ ಸಿಂಗ್ ರಜಪೂತ್ (Sushanth Singh Rajaput) ಅವರ ಜನ್ಮದಿನ ಇಂದು. ಈ ವೇಳೆ ಅಭಿಮಾನಿಗಳು, ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಅವರನ್ನು ನೆನಪಿಸಿಕೊಂಡು ಭಾವುಕರಾಗುತ್ತಿದ್ದಾರೆ.

ಈ ನಡುವೆಯೇ, ನಟಿ ರಿಯಾ ಚಕ್ರವರ್ತಿ (Rhea Chakraborty) ಅವರು ಸಾಮಾಜಿಕ ಮಾಧ್ಯಮದಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ. ಸುಶಾಂತ್​ ಸಿಂಗ್​ ಅವರ ಹುಟ್ಟುಹಬ್ಬದ ನಿಮಿತ್ತ ಈ ಪೋಸ್ಟ್​ ಶೇರ್​ ಮಾಡಲಾಗಿದೆ. ರಿಯಾ ಅವರು ತಮ್ಮ ಇನ್​ಸ್ಟಾಗ್ರಾಮ್​ (Instagram) ಪ್ರೊಫೈಲ್‌ನಲ್ಲಿ ಸುಶಾಂತ್​ ಸಿಂಗ್​ ಅವರ ಜೊತೆಗಿರುವ ಕೆಲವು ಥ್ರೋಬ್ಯಾಕ್ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.

ಶೀರ್ಷಿಕೆಯಲ್ಲಿ, ನಟಿ ಸರಳವಾಗಿ ಇನ್ಫಿನಿಟಿ ಎಮೋಜಿಯನ್ನು (Infinity emogy) ಸೇರಿಸಿದ್ದಾರೆ ಮತ್ತು “+1” ಎಂದು ಬರೆದಿದ್ದಾರೆ. ತಮ್ಮ ಪ್ರೀತಿ ಅನಂತವಾದದ್ದು, ಅದಕ್ಕೆ ಇನ್ನೊಂದು ವರ್ಷ ಎಂದು ಚುಟುಕಾಗಿ ಭಾವುಕರಾಗಿ ಈ ಪೋಸ್ಟ್​ ಮಾಡಿದ್ದಾರೆ.

ಸುಶಾಂತ್​ ಸಿಂಗ್​ ಸಾವು ಕೊಲೆ ಎಂಬ ಶಂಕೆ ವ್ಯಕ್ತವಾಗುತ್ತಲೇ ಅನೇಕ ಮಂದಿಯ ವಿಚಾರಣೆ ನಡೆಸಲಾಗಿತ್ತು. ಸುಶಾಂತ್​ ಸಿಂಗ್​ ಅವರ ಕೊನೆಯ ದಿನಗಳಲ್ಲಿ ಜೊತೆಯಾಗಿದ್ದ, ಸುಶಾಂತ್ ಸಿಂಗ್ ಜೊತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ (Live in relationship) ನಟಿ ರಿಯಾ ಚಕ್ರವರ್ತಿಯವರ ವಿಚಾರಣೆಯೂ ನಡೆದಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!