ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬಾಲಿವುಡ್​ ನಟ ವಿಕ್ಕಿ ಕೌಶಲ್​- ಕತ್ರಿನಾ ಆಗ್ತಾರಾ ಮದುವೆ: ಕಪೂರ್​ ಕುಟುಂಬದ ಕುಡಿ ಹೇಳಿದ್ದೇನು?

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಬಾಲಿವುಡ್​ ಯಂಗ್​ ಹೀರೋ ವಿಕ್ಕಿ ಕೌಶಲ್​ ಜೊತೆ ನಟಿ ಕತ್ರಿನಾ ಕೈಫ್​ ಸುತ್ತಾಟ ನಡೆಸುತ್ತಿದ್ದು, ಈ ವಿಚಾರವನ್ನು ಈಗ ಕಪೂರ್​ ಕುಟುಂಬದ ಕುಡಿ ಖಚಿತಪಡಿಸಿದೆ.
ವಿಕ್ಕಿ ಕೌಶಲ್​ ಹಾಗೂ ಕತ್ರಿನಾ ಕೈಫ್​ ಒಟ್ಟಾಗಿ ಸಾಕಷ್ಟು ಬಾರಿ ಕಾಣಿಸಿಕೊಂಡಿದ್ದಿದೆ. ಇವರ ನಡುವೆ ಪ್ರೀತಿ ಹುಟ್ಟಿದೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ, ಇದನ್ನು ಇಬ್ಬರೂ ಅಲ್ಲಗಳೆದಿದ್ದರು. ನಾವಿಬ್ಬರೂ ಬೆಸ್ಟ್​ ಫ್ರೆಂಡ್ಸ್​​ ಅಷ್ಟೇ ಎಂದು ಮಾಧ್ಯಮದ ಮುಂದೆ ಹೇಳಿಕೊಂಡಿದ್ದರು. ಆದರೆ, ಈಗ ಅನಿಲ್​ ಕಪೂರ್​ ಮಗ ಹರ್ಷವರ್ಧನ್​ ಕಪೂರ್​ ಕತ್ರಿನಾ-ವಿಕ್ಕಿ ಸಂಬಂಧದ ಬಗ್ಗೆ ಮೌನ ಮುರಿದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಹರ್ಷವರ್ಧನ್​, ‘ಕತ್ರಿನಾ-ವಿಕ್ಕಿ ಆಪ್ತರಾಗಿದ್ದಾರೆ. ಇಬ್ಬರೂ ಮದುವೆ ಆಗುವ ಆಲೋಚನೆಯಲ್ಲಿ ಕೂಡ ಇದ್ದಾರೆ. ಬಹುಶಃ ಈ ವಿಚಾರ ಹೇಳಿದ ನಂತರದಲ್ಲಿ ನಾನು ತೊಂದರೆಗೆ ಸಿಲುಕಬಹುದು’ ಎಂದಿದ್ದಾರೆ. ಸದ್ಯ ಇವರ ಹೇಳಿಕೆ ಬಾಲಿವುಡ್ ಅಂಗಳದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.
2018ರ ಸಮಯ. ‘ಕಾಫಿ ವಿತ್​ ಕರಣ್’​ ಶೋನಲ್ಲಿ ಕತ್ರಿನಾ ಪಾಲ್ಗೊಂಡಿದ್ದರು. ಈ ವೇಳೆ ವಿಕ್ಕಿ ಜತೆ ತೆರೆ ಹಂಚಿಕೊಳ್ಳುವ ಆಸಕ್ತಿ ತೋರಿದ್ದರು ಕತ್ರಿನಾ. ಇದಾದ ನಂತರ ಅಂದರೆ, 2019ರಲ್ಲಿ ಇಬ್ಬರೂ ಮುಂಬೈನಲ್ಲಿ ಊಟಕ್ಕೆ ಒಟ್ಟಾಗಿ ಸೇರಿದ್ದರು. ಇದರ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss