ಬಾಲಿವುಡ್ ನಟ ವಿಕ್ರಮ್ ಗೋಖಲೆ ಆರೋಗ್ಯದಲ್ಲಿ ಚೇತರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೆಲ ತಿಂಗಳುಗಳಿಂದ ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಬಾಲಿವುಡ್ ನಟ ವಿಕ್ರಮ್ ಗೋಖಲೆ ಎರಡು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಅವರ ಚಿಕಿತ್ಸೆಯ ನಂತರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ.

75 ವರ್ಷದ ವಿಕ್ರಮ್ ಗೋಖಲೆ ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ನಟ ಇದೀಗ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಕಣ್ಣು ತೆರೆದು ಕುಟುಂಬದವರ ಬಳಿ ಮಾತನಾಡುತ್ತಿದ್ದಾರೆ. ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. 48 ಗಂಟೆಗಳಲ್ಲಿ ವೆಂಟಿಲೇಟರ್‌ನಿಂದ ಹೊರತೆಗೆಯಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.

ಬಿಗ್ ಬಿ ಜೊತೆ ʻಅಗ್ನಿಪಥ್ʼ, ಸಲ್ಮಾನ್ ಖಾನ್ ಜೊತೆ ʻಹಮ್ ದಿಲ್ ದೇ ಚುಕೇ ಸನಮ್ʼ, ಶಿಲ್ಪಾ ಶೆಟ್ಟಿ ನಟನೆಯ `ನಿಕ್ಕಮ್ಮಾ’ ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ವಿಕ್ರಮ್ ಗೋಖಲೆ ನಟಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!