ಯುಪಿ ಸಿಎಂ ಭೇಟಿಯಾದ ಬಾಲಿವುಡ್‌ ಕ್ವೀನ್:‌ ʻಮಹಾರಾಜ್‌ʼ ಜೀ ಎಂದು ಪೋಸ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲಿವುಡ್ ಕ್ವೀನ್, ಫೈರ್‌ಬ್ರಾಂಡ್ ಕಂಗನಾ ರಣಾವತ್ ಯಾವಾಗಲೂ ಸೆನ್ಸೇಷನಲ್ ಕಮೆಂಟ್‌ಗಳಿಂದ ಸುದ್ದಿಯಲ್ಲಿರುತ್ತಾರೆ. ಸದ್ಯ ಸಿನಿಮಾ, ಲಾಕಪ್ ಶೋನಲ್ಲಿ ಬ್ಯುಸಿಯಾಗಿರುವ ಕಂಗನಾ ಇದೀಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ್ದಾರೆ. ಈ ವಿಚಾರವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ.

ಪಂಚ ರಾಜ್ಯಗಳ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಮತ್ತೊಮ್ಮೆ ಸಿಎಂ ಹುದ್ದೆಯನ್ನು ಅಲಂಕರಿಸಿದ್ದಕ್ಕಾಗಿ ಅಭಿನಂದಿಸಲು ಯೋಗಿ ಆದಿತ್ಯಾನಾಥ್‌ ಅವರನ್ನು ಭೇಟಿಯಾಗಿದ್ದಾರೆ. ಈ ಕುರಿತು ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಮಹಾರಾಜ್ ಯೋಗಿ ಆದಿತ್ಯನಾಥ್‌ರ ಗೆಲುವಿನ ಬಳಿಕ ಅವರನ್ನು ಭೇಟಿ ಮಾಡುವ ಅದೃಷ್ಟ ನನಗೆ ಇಂದು ಸಿಕ್ಕಿದೆ. ಈ ಭೇಟಿಯನ್ನು ಕಂಗನಾ ಅದ್ಭುತ ಸಂಜೆ ಎಂದು ಬಿಂಬಿಸಿದ್ದಾರೆ. ನಾನು ಮಹಾರಾಜರ ಆಶೀರ್ವಾದ ಪಡೆದೆ. ಅವರನ್ನು ನೋಡಿ ನನಗೆ ಹೆಮ್ಮೆ ಎನಿಸುತ್ತಿದೆ ಎಂದು ಬರೆದುಕೊಂಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!