ಬಾಲಿವುಡ್ ನಟಿ ರಾಣಿ ಮುಖರ್ಜಿ ಅವರ ಅಜ್ಜಿ ಆರತಿ ರಾಯ್ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಲಿವುಡ್ ನಟಿ ರಾಣಿ ಮುಖರ್ಜಿ ಅವರ ಅಜ್ಜಿ, ಖ್ಯಾತ ಬೆಂಗಾಲಿ ನಟಿ ದೇಬಶ್ರೀ ಅವರ ತಾಯಿ ಆರತಿ ರಾಯ್ ಅವರು ನಿಧನರಾಗಿದ್ದಾರೆ.

ಅವರಿಗೆ 92 ವರ್ಷ ವಯಸ್ಸಾಗಿತ್ತು. ಕೆಲ ತಿಂಗಳಿಂದ ತಮ್ಮ ಹಿರಿಯ ಮಗಳ ಜತೆ ವಾಸ ಮಾಡುತ್ತಿದ್ದ ಆರತಿ ಅವರನ್ನುಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿ ಆಗದೆ ಮಂಗಳವಾರ (ನವೆಂಬರ್ 8) ಅವರು ನಿಧನ ಹೊಂದಿದ್ದಾರೆ.

ದೇಬಶ್ರೀ ಅವರು ಬೆಂಗಾಲಿ ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ಕೊಡುಗೆಯನ್ನು ಪರಿಗಣಿಸಿ ಸಾಕಷ್ಟು ಪ್ರಶಸ್ತಿಗಳು ಲಭಿಸಿವೆ. ದೇಬಶ್ರೀ ಈ ಮಟ್ಟಕ್ಕೆ ಬೆಳೆಯಲು ಅವರ ತಾಯಿಯೇ ಕಾರಣವಂತೆ. ಈ ವಿಚಾರವನ್ನು ದೇಬಶ್ರೀ ಅನೇಕ ಬಾರಿ ಹೇಳಿಕೊಂಡಿದ್ದಿದೆ.

ಆರತಿ ರಾಯ್ ಅವರು ರಾಣಿ ಮುಖರ್ಜಿಯ ಅಜ್ಜಿ. ರಾಣಿ ಮುಖರ್ಜಿಯ ತಾಯಿ ಕೃಷ್ಣಾ ಮುಖರ್ಜಿ ಹಾಗೂ ದೇಬಶ್ರೀ ಸಹೋದರಿಯರು. ರಾಣಿ ಮುಖರ್ಜಿ ಅವರಿಗೆ ಅನಾರೋಗ್ಯ ಕಾಡಿದೆ ಎನ್ನಲಾಗಿದೆ. ಈ ಕಾರಣಕ್ಕೆ ಅವರು ಆರತಿ ಅಂತ್ಯಸಂಸ್ಕಾರದಲ್ಲಿ ಭಾಗಿ ಆಗುತ್ತಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!