ಮತ್ತೆ ಸ್ಯಾಂಡಲ್ ವುಡ್ ನತ್ತ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಲಿವುಡ್ ನಟಿ, ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ಮತ್ತೆ ಕನ್ನಡ ಸಿನಿಮಾಗೆ ಕಂಬ್ಯಾಕ್ ಆಗ್ತಿದ್ದಾರೆ. ಹೌದು, ನಿರ್ದೇಶಕ ಪ್ರೇಮ್ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ.

ಧ್ರುವ ಸರ್ಜಾ ಅಭಿನಯದ `ಕೆಡಿ’ ಚಿತ್ರದಲ್ಲಿ ಶಿಲ್ಪಾ ಶೆಟ್ಟಿ ಪವರ್ ಫುಲ್ ಪಾತ್ರ ಮಾಡಲಿದ್ದಾರೆ.

ಈಗಾಗಲೇ ಕನ್ನಡದ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಶಿಲ್ಪಾ , ರವಿಚಂದ್ರನ್, ಉಪೇಂದ್ರ ಜೊತೆ ನಟಿಸಿ ಬಳಿಕ ಬಾಲಿವುಡ್ ನತ್ತ ಮುಖಮಾಡಿದ್ದರು.

`ಕೆಡಿ’ಯಲ್ಲಿ ಶಿಲ್ಪಾ ರೆಟ್ರೋ ಸ್ಟೈಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯಾಕಂದ್ರೆ `ಕೆಡಿ’ 80ರ ದಶಕದ ರಕ್ತಸಿಕ್ತ ಕಥೆಯ ಸಿನಿಮಾ. ಶಿಲ್ಪಾ ಶೆಟ್ಟಿ ಎಂಟ್ರಿ ಕೆಡಿ ಖದರ್ ಇರೋದ್ರಿಂದ ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!