ಕೆಜಿಎಫ್ ಸೆಟ್‌ನಲ್ಲಿ ಶ್ರೀನಿಧಿಗೆ ಕಿರುಕುಳ ನೀಡಿದ್ರಾ ಯಶ್?, ಬಿಟೌನ್ ವಿಮರ್ಶಕರ ಟ್ವೀಟ್‌ಗೆ ಶ್ರೀನಿಧಿ ಪ್ರತಿಕ್ರಿಯೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೆಜಿಎಫ್ ಚಿತ್ರದ ಬಗ್ಗೆ ಹೇಳಬೇಕಾಗಿಲ್ಲ. ಈ ಸಿನಿಮಾ ದೇಶಾದ್ಯಂತ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಎಂಬುದು ಎಲ್ಲರಿಗೂ ಗೊತ್ತು. ಮಾಸ್ ಆಕ್ಷನ್ ಚಿತ್ರಗಳಿಗೆ ಟ್ರೆಂಡ್ ಆದ ಈ ಸಿನಿಮಾ ಮೂಲಕ ಯಶ್‌ ಜಾಗತಿಕ ಮನ್ನಣೆ ಗಳಿಸಿದ್ದಂತೂ ಸುಳ್ಳಲ್ಲ. ಯಶ್‌ಗೆ ನಾಯಕಿಯಾಗಿ  ಶ್ರೀನಿಧಿ ಶೆಟ್ಟಿ ತೆರೆ ಹಂಚಿಕೊಂಡಿದ್ದಾರೆ. ಇದೀಗ ಬಾಲಿವುಡ್‌ ವಿಮರ್ಶಕರೊಬ್ಬರು ಕೆಜಿಎಫ್‌ ಸೆಟ್‌ನಲ್ಲಿ ರಾಕಿಭಾಯ್‌ ಶೆಟ್ಟಿಗೆ ಕಿರುಕುಳ ನೀಡಿದ್ರಂತೆ ಎಂಬ ಬಾಂಬ್‌ ಹಾಕಿದ್ದಾರೆ.

ಬಾಲಿವುಡ್‌ನ ಜನಪ್ರಿಯ ವಿಮರ್ಶಕ ಉಮೈರ್ ಸಂದು ಶ್ರೀನಿಧಿ ಅವರ ಫೋಟೋವನ್ನು ಪೋಸ್ಟ್ ಮಾಡಿದ್ದು,  ಈ ಮಾತು ಶ್ರೀನಿಧಿಯವರದ್ದು ಎಂದು ಸಂಚಲನ ಟ್ವೀಟ್ ಮಾಡಿದ್ದಾರೆ. ”ಕೆಜಿಎಫ್ ಸೆಟ್‌ನಲ್ಲಿ ಯಶ್ ಜೊತೆ ಕೆಲಸ ಮಾಡುವುದು ತುಂಬಾ ಕಷ್ಟಕರವಾಗಿತ್ತು. ಅವರು ನನಗೆ ಕಿರುಕುಳ ನೀಡಿದ್ದರು. ಅವರ ಜೊತೆ ಇನ್ನೆಂದೂ ಸಿನಿಮಾ ಮಾಡುವುದಿಲ್ಲ ಎಂದು ಉಮೈರ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಶ್ರೀನಿಧಿ ಪ್ರತಿಕ್ರಿಯಿಸಿ ರಿಪೋಸ್ಟ್‌ ಮಾಡಿದ್ದಾರೆ.

ಕೆಲವರು ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಪಡಿಸಿಕೊಂಡು ಕೆಟ್ಟದ್ದನ್ನು ಹರಡಲು ಪ್ರಯತ್ನಿಸುತ್ತಾರೆ. ಆದರೆ ಪ್ರೀತಿ ಮತ್ತು ಸಂತೋಷವನ್ನು ಹರಡಲು ನಾನು ಆ ವೇದಿಕೆಯನ್ನು ಬಳಸುತ್ತೇನೆ. ಇದೇ ಸಂದರ್ಭದಲ್ಲಿ ಕೆಜಿಎಫ್ ನಂತಹ ಅದ್ಭುತ ಸಿನಿಮಾ ಮಾಡುವಾಗ ನನಗೆ ರಾಕಿಂಗ್ ಸ್ಟಾರ್ ಯಶ್ ಇದ್ದಾರೆ ಎಂದು ಹೇಳಲು ಬಯಸುತ್ತೇನೆ. ಅವರ ಜೊತೆ ಕೆಲಸ ಮಾಡಿದ್ದಕ್ಕೆ ಗೌರವವಿದೆ.  ಆತ ಒಳ್ಳೆಯ ವ್ಯಕ್ತಿ, ಸ್ನೇಹಿತ, ಮಾರ್ಗದರ್ಶಕ ಮತ್ತು ಸ್ಫೂರ್ತಿ. ನಾನು ಮೊದಲಿನಿಂದಲೂ ಯಶ್ ಅವರ ಅಭಿಮಾನಿ’ ಎಂದು ಬರೆದುಕೊಂಡಿದ್ದಾರೆ. ಶ್ರೀನಿಧಿ ಪೋಸ್ಟ್‌ ಬಾಲಿವುಡ್ ವಿಮರ್ಶಕರ ಕಾಮೆಂಟ್‌ಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ತೀರ್ಮಾನಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!