Friday, July 1, 2022

Latest Posts

ಸಿದ್ಧಾರ್ಥ್ ಶುಕ್ಲಾ ಇನ್ನಿಲ್ಲ: ಕಂಬನಿ ಮಿಡಿದ ಬಾಲಿವುಡ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಕಿರುತೆರೆ ಜನಪ್ರಿಯ ನಟ, ಬಿಗ್‌ಬಾಸ್-13 ವಿನ್ನರ್ ಸಿದ್ಧಾರ್ಥ್ ಶುಕ್ಲಾ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಸಿದ್ಧಾರ್ಥ್ ಸಾವು ಅನಿರೀಕ್ಷಿತವಾಗಿದ್ದು, ಬಾಲಿವುಡ್ ಇಂಡಸ್ಟ್ರಿ ಕಣ್ಣೀರಿಟ್ಟಿದೆ. ಬಾಲಿವುಡ್ ನಟರಾದ ಮಾಧುರಿ ದೀಕ್ಷಿತ್, ಕಿಯಾರಾ ಅಡ್ವಾನಿ ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಿಂಗರ್ ನೇಹ ಕಕ್ಕರ್ ಟ್ವೀಟ್ ಮಾಡಿ, ನನ್ನ ಹೃದಯ ಹಾಗೂ ಮೆದುಳಿಗೆ ಒಂದು ಕ್ಷಣ ಏನೂ ತಿಳಿಯುತ್ತಿಲ್ಲ ಎಂದಿದ್ದಾರೆ.
ಅರ್ಮಾನ್ ಮಲಿಕ್, ರಶ್ಮಿ ದೇಸಾಯಿ,ಸುನಿಲ್ ಗ್ರೋವರ್, ಕಪಿಲ್ ಶರ್ಮಾ, ಮನೋಜ್ ಬಾಜ್‌ಪೈ, ಮಲ್ಲಿಕಾ ಶೆರಾವತ್, ಬಿಪಾಶ ಬಸು, ರಾಹುಲ್ ಗಾಂಧಿ, ರಿತೇಶ್ ದೇಶ್‌ಮುಖ್,ಮಾಧವನ್, ರವೀನಾ ಟಂಡನ್, ಮಧುರ್ ಬಂಡಾರ್ಕರ್, ಫರಾಖಾನ್ ಈ ಸಾವನ್ನು ನಂಬುವುದಕ್ಕೆ ಆಗುತ್ತಿಲ್ಲ. ಈ ವರ್ಷ ಇನ್ನೆಷ್ಟು ಕೆಟ್ಟದಾಗಲು ಸಾಧ್ಯ? ಸಿದ್ಧಾರ್ಥ್ ಆತ್ಮಕ್ಕೆ ಶಾಂತಿ ಸಿಗಲಿ. ಅವರ ತಾಯಿ ಹಾಗೂ ಸಹೋದರಿಯರಿಗೆ ಈ ನೋವಿನ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss