13 ವರ್ಷಗಳ ಬಳಿಕ ʼಅವತಾರ್ʼ ರೀ- ರಿಲೀಸ್:‌ ಪಾರ್ಟ್-2‌ ನೋಡುವುದಕ್ಕಿಂತ ಮುನ್ನ ಪಾರ್ಟ್-1‌ ಮತ್ತೊಮ್ಮೆ ಕಣ್ತುಂಬಿಕೊಳ್ಳಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಹಾಲಿವುಡ್ ಬ್ಲಾಕ್‌ಬಸ್ಟರ್ ವೈಜ್ಞಾನಿಕ ಕಾಲ್ಪನಿಕ ಚಿತ್ರ ‘ಅವತಾರ್’ ಸೆಪ್ಟೆಂಬರ್ 23 ರಂದು ಭಾರತದ ಚಿತ್ರಮಂದಿರಗಳಲ್ಲಿ ಮತ್ತೆ ಬಿಡುಗಡೆಯಾಗಲಿದೆ.
2008 ರಲ್ಲಿ ಬಿಡುಗಡೆಯಾಗಿದ್ದ ವಿಶ್ವಾದ್ಯಂತ ಸಂಚಲನ ಸೃಷ್ಟಿಸಿತ್ತು. ಭಾರತದಲ್ಲಿಯೂ ದೊಡ್ಡ ಹಿಟ್‌ ಎನಿಸಿಕೊಂಡಿತ್ತು. ಭಾರತೀಯ ಸಿನಿ ಪ್ರೇಮಿಗಳು ಮುಗಿಬಿದ್ದು ಈ ಚಿತ್ರವನ್ನು ನೋಡಿದ್ದರು. ಇದೀಗ ಅವತಾರ್‌ ಪಾರ್ಟ್‌- 2, ಪಾರ್ಟ್‌ -3 ಬಿಡುಗಡೆಗೆ ಸಿದ್ಧವಾಗಿವೆ. ಈ ನಡುವೆ ಅವತಾರ್‌ನ ಮೊದಲ ಭಾಗವಾದ ಅವತಾರ್ ಸೆಪ್ಟೆಂಬರ್‌ 23ರಂದು‌ 13 ವರ್ಷಗಳ ಬಳಿಕ ಮತ್ತೊಮ್ಮೆ ರಿ-ರಿಲೀಸ್‌ ಆಗಲಿದೆ.
4K ಹೈ ಡೈನಾಮಿಕ್ ರೇಂಜ್‌ನಲ್ಲಿ ಚಿತ್ರವು ಥಿಯೇಟರ್‌ಗಳಿಗೆ ಮರಳುತ್ತಿದೆ. “ನಮ್ಮ ಮುಂದಿನ ಅಧ್ಯಾಯ ಪ್ರಾರಂಭವಾಗುವ ಮೊದಲು, ಸೆಪ್ಟೆಂಬರ್ 23 ರಂದು ಥಿಯೇಟರ್‌ಗಳಲ್ಲಿ ರೀ-ರಿಲೀಸ್ ಮಾಡಿದ 4K 3D HDR ನಲ್ಲಿ ಅವತಾರ್ ಚಿತ್ರವನ್ನು ಮತ್ತೊಮ್ಮೆ ಅನುಭವಿಸಿ.” ಎಂದು ಚಿತ್ರದ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಭಾರತೀಯ ಪ್ರೇಕ್ಷಕರಿಗಾಗಿ ಪೋಸ್ಟರ್‌, ಟ್ರೇಲರ್‌ ಗಳಿರುವ ಟ್ವೀಟ್‌ ಅನ್ನು ಹಂಚಿಕೊಂಡಿದ್ದಾರೆ.
ಚಿತ್ರವು 82 ಅತ್ಯುತ್ತಮ ಛಾಯಾಗ್ರಹಣ, ಅತ್ಯುತ್ತಮ ಕಲಾ ನಿರ್ದೇಶನ ಮತ್ತು ಅತ್ಯುತ್ತಮ ದೃಶ್ಯ ಸಂಕಲನಕ್ಕಾಗಿ 3 ಆಸ್ಕರ್ ಪ್ರಶಸ್ತಿಗಳನ್ನು ಗೆದ್ದಿದೆ. ಈ ಚಿತ್ರವು ಪಾರ್ಶ್ವವಾಯು ಪೀಡಿತ ಯುಎಸ್ ನೌಕಾಪಡೆಯ‌ ಸೇನಾನಿಯೊಬ್ಬನ ಕಥೆಯನ್ನು ಹೇಳುತ್ತದೆ. ಅವರು ನಡೆಸುತ್ತಿದ್ದ ವಿಶಿಷ್ಟವಾದ ಕಾರ್ಯಾಚರಣೆಯಲ್ಲಿ ಪಂಡೋರಾ ಹೆಸರಿನ ಹಚ್ಚ ಹಸಿರಿನ ಆವೃತವಾದ ವಾಸಯೋಗ್ಯ ಗ್ರಹಕ್ಕೆ ಆತನನ್ನು ಕಳುಹಿಸುತ್ತಾರೆ. ಅಲ್ಲಿ ಆತ ತನ್ನ ಜಗತ್ತು ಹಾಗೂ ತಾನು ಹೋದ ಜಗತ್ತಿನ ನಡುವೆ ಸಂಘರ್ಷಗಳನ್ನು ಎದುರಿಸುವುದು ಚಿತ್ರದ ಕಥೆ. ಈ ಬಾರಿ ರೀ ರಿಲೀಸ್‌ ಆಗುವ ಚಿತ್ರ ಚಿತ್ರಮಂದಿರದಲ್ಲಿ ಕೇವಲ 2 ವಾರ ಮಾತ್ರವೇ ಪ್ರದರ್ಶನ ಕಾಣಲಿದೆ.
ಚಿತ್ರಜಗತ್ತಿನ ಮಹಾಶಿಲ್ಪಿ ಜೇಮ್ಸ್ ಕ್ಯಾಮರೂನ್ ಈ ಸರಣಿಯ ನಿರ್ದೇಶಕ. ಅವರು ಈ ಹಿಂದೆ ‘ಟೈಟಾನಿಕ್’, ‘ದಿ ಟರ್ಮಿನೇಟರ್’ ಮತ್ತು ‘ಟರ್ಮಿನೇಟರ್ 2: ಜಡ್ಜ್‌ಮೆಂಟ್ ಡೇ’ ನಂತಹ ಬ್ಲಾಕ್‌ಬಸ್ಟರ್ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಅವತಾರ್‌ ಒಟ್ಟು 5 ಭಾಗಗಳಲ್ಲಿ ತೆರೆಗೆ ಬರಲಿದೆ. 2ನೇ ಭಾಗವಾದ ‘ಅವತಾರ್: ದಿ ವೇ ಆಫ್ ವಾಟರ್’, ಡಿಸೆಂಬರ್ 16, 2022 ರಂದು ಚಿತ್ರಮಂದಿರಗಳಿಗೆ ಅಪ್ಪಳಿಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!