ಮಣಿಪುರದಲ್ಲಿ ಮನೆ ಮೇಲೆ ಬಾಂಬ್ ದಾಳಿ: ಇಬ್ಬರು ಮಕ್ಕಳ ದುರ್ಮ*ರಣ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಣಿಪುರದಲ್ಲಿ ಮತ್ತೆ ಹಿಂಸಾಚಾರದ ಬೆಂಕಿ ಉರಿದಿದೆ. ಹಲವು ವರ್ಷಗಳಿಂದ ಅಶಾಂತಿಯಲ್ಲಿರುವ ರಾಜ್ಯದಲ್ಲಿ ಮಂಗಳವಾರ ಮುಂಜಾನೆ ನಡೆದ ಬಾಂಬ್ ದಾಳಿ ಮನಕಲಕುವ ದುರಂತಕ್ಕೆ ಕಾರಣವಾಗಿದೆ. ಬಿಷ್ಣುಪುರ ಜಿಲ್ಲೆಯ ಮೊಯಿರಾಂಗ್ ಟ್ರೋಂಗ್ಲಾಬಿ ಗ್ರಾಮದಲ್ಲಿರುವ ಮನೆ ಒಂದರ ಮೇಲೆ ಸ್ಫೋಟಕ ಎಸೆಯಲ್ಪಟ್ಟ ಪರಿಣಾಮ ಇಬ್ಬರು ಪುಟಾಣಿ ಮಕ್ಕಳು ಮೃತಪಟ್ಟಿದ್ದು, ಅವರ ತಾಯಿ ಗಾಯಗೊಂಡಿದ್ದಾರೆ. ಅಧಿಕಾರಿಗಳ ಮಾಹಿತಿ ಪ್ರಕಾರ, ಬೆಳಗಿನ ಜಾವ ಸುಮಾರು 1 ಗಂಟೆ ವೇಳೆಗೆ ಕುಟುಂಬದವರು ನಿದ್ರೆಯಲ್ಲಿದ್ದಾಗ ಈ ದಾಳಿ ನಡೆದಿದೆ. ಸ್ಫೋಟದ ತೀವ್ರತೆಗೆ ಐದು … Continue reading ಮಣಿಪುರದಲ್ಲಿ ಮನೆ ಮೇಲೆ ಬಾಂಬ್ ದಾಳಿ: ಇಬ್ಬರು ಮಕ್ಕಳ ದುರ್ಮ*ರಣ