ಶೂಟಿಂಗ್ ವೇಳೆ ಬಾಂಬ್ ಬ್ಲಾಸ್ಟಿಂಗ್: ಬಾಲಿವುಡ್ ನಟ ಸಂಜಯ್ ದತ್ ಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲಿವುಡ್ ನಟ ಸಂಜಯ್ ದತ್ (Sanjay Dutt)ಕನ್ನಡದ ಕೆಡಿ (KD) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಈ ವೇಳೆ ಸಂಜಯ್ ದತ್ ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಇದೆ.

ಸಾಹಸ ಸನ್ನಿವೇಶದಲ್ಲಿ ಬಾಂಬ್ ಬ್ಲಾಸ್ಟಿಂಗ್ (Bomb Blasting) ಮಾಡುವಾಗ ಸಂಜಯ್ ಗಾಯ ಮಾಡಿಕೊಂಡಿದ್ದಾರೆ.

ಧ್ರುವ ಸರ್ಜಾ (Dhruva Sarja) ಮತ್ತು ಜೋಗಿ ಪ್ರೇಮ್ (Jogi Prem) ಕಾಂಬಿನೇಷನ್ ಸಿನಿಮಾ ಇದಾಗಿದ್ದು, ಫೈಟಿಂಗ್ ಸನ್ನಿವೇಶದ ಚಿತ್ರೀಕರಣ ನಡೆಯುತ್ತಿದೆ. ಈ ವೇಳೆ ಬಾಂಬ್ ಬ್ಲಾಸ್ಟ್ ಮಾಡುವಾಗ ಸಂಜಯ್ ದತ್ ಅವರ ಮೊಣಕೈ ಹಾಗೂ ಮುಖಕ್ಕೆ ಗಾಯವಾಗಿದೆ ಎಂದು ಹೇಳಲಾಗುತ್ತಿದೆ.

ಸಂಜಯ್ ದತ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ ನ ಮೊದಲನೇ ಸಿನಿಮಾ ಇದಾಗಿದ್ದು, ಸಂಜಯ್ ಅವರ ಕನ್ನಡದ ಎರಡನೇ ಚಿತ್ರ ಎನ್ನುವುದು ವಿಶೇಷ. ಈ ಸಿನಿಮಾದಲ್ಲಿ ಬಾಲಿವುಡ್ ಇನ್ನೋರ್ವ ಕಲಾವಿದರು ನಟಿಸುತ್ತಿದ್ದು, ಈ ಚಿತ್ರದ ಮೂಲಕ ಶಿಲ್ಪಾ ಶೆಟ್ಟಿ ಮತ್ತೆ ಕನ್ನಡಕ್ಕೆ ಬಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!