SHOCKING| ಕೃಷ್ಣಾ ಎಕ್ಸ್ ಪ್ರೆಸ್‌ನಲ್ಲಿ ಬಾಂಬ್ ಬೆದರಿಕೆ: ಭೀತಿಯಲ್ಲಿ ಪ್ರಯಾಣಿಕರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೃಷ್ಣಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಾಂಬ್ ಇದೆ ಎಂದು ಅಪರಿಚಿತ ವ್ಯಕ್ತಿಯೊಬ್ಬ ಪೊಲೀಸ್ ಕಂಟ್ರೋಲ್‌ ರೂಂಗೆ ಕರೆ ಮಾಡಿದ್ದಾನೆ. ಇದರಿಂದ ಎಚ್ಚೆತ್ತ ಪೊಲೀಸರು ಹೈದರಾಬಾದ್‌ನ ಮೌಲಾಲಿ ಬಳಿ ಕೃಷ್ಣ ಎಕ್ಸ್‌ಪ್ರೆಸ್ ಅನ್ನು ತಡೆದು ರೈಲನ್ನು ತಪಾಸಣೆ ನಡೆಸಲಾಯಿತು. ನಂತರ ಸಿಕಂದರಾಬಾದ್‌ಗೆ ತೆರಳಿ ಅಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸಿಕಂದರಾಬಾದ್ ರೈಲು ನಿಲ್ದಾಣದಲ್ಲೂ ಪೊಲೀಸರು ಕೃಷ್ಣಾ ಎಕ್ಸ್‌ಪ್ರೆಸ್ ರೈಲಿನಲ್ಲಿ ತಪಾಸಣೆ ನಡೆಸಿದರು. ಬಾಂಬ್‌ ಪತ್ತೆಯಾಗದ ಕಾರಣ ಇದೊಂದು ಹುಸಿ ಕರೆ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ತಿರುಪತಿಯಿಂದ ಅದಿಲಾಬಾದ್ ಗೆ ತೆರಳುತ್ತಿದ್ದ ಕೃಷ್ಣಾ ಎಕ್ಸ್ ಪ್ರೆಸ್ ರೈಲಿಗೆ ಬಾಂಬ್ ಬೆದರಿಕೆ ಬಂದಿದ್ದು, ಭಾರೀ ಭೀತಿಗೆ ಕಾರಣವಾಯಿತು.  ಕೆಲವೇ ನಿಮಿಷಗಳಲ್ಲಿ ಸಿಕಂದರಾಬಾದ್ ರೈಲು ನಿಲ್ದಾಣಕ್ಕೆ ಬರಬೇಕಿತ್ತು. ಅಷ್ಟರಲ್ಲಾಗಲೇ ವ್ಯಕ್ತಿಯೊಬ್ಬ ಪೊಲೀಸ್ ಕಂಟ್ರೋಲ್‌ ರೂಂಗೆ ಕರೆ ಮಾಡಿ ಕೃಷ್ಣ ಎಕ್ಸ್ ಪ್ರೆಸ್ ರೈಲಿನಲ್ಲಿ ಬಾಂಬ್ ಇಡಲಾಗಿದೆ ಎಂದು ಹೆದರಿಸಿದ್ದಾನೆ.

ತಕ್ಷಣ ಬಾಂಬ್ ಸ್ಕ್ವಾಡ್ ಸಿಬ್ಬಂದಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಬಂದ ಬಾಂಬ್ ಸ್ಕ್ವಾಡ್ ಸಿಬ್ಬಂದಿ ರೈಲಿನಲ್ಲಿ ತೀವ್ರ ತಪಾಸಣೆ ನಡೆಸಿದರು. ಭಾರಿ ಪ್ರಮಾಣದಲ್ಲಿ ಪೊಲೀಸ್ ಪಡೆಗಳ ಆಗಮನ, ರೈಲನ್ನು ತೀವ್ರವಾಗಿ ತಪಾಸಣೆ ನಡೆಸುತ್ತಿರುವ ಸಿಬ್ಬಂದಿ.. ಇದನ್ನೆಲ್ಲ ಕಂಡು ಏನಾಗುತ್ತಿದೆ ಎಂದು ಅರ್ಥವಾಗದೆ ಪ್ರಯಾಣಿಕರು ಆತಂಕಗೊಂಡರು. ಬಾಂಬ್ ಬೆದರಿಕೆ ಕರೆ ಕೇಳಿದ ಪ್ರಯಾಣಿಕರು ಭಯಭೀತರಾಗಿದ್ದರು.

ಕೃಷ್ಣಾ ಎಕ್ಸ್‌ಪ್ರೆಸ್ ರೈಲು ಉತ್ತರ ತೆಲಂಗಾಣದಿಂದ ರಾಯಲಸೀಮಾಕ್ಕೆ ಸಂಪರ್ಕ ಕಲ್ಪಿಸುತ್ತದೆ ಮತ್ತು ಆದಿಲಾಬಾದ್ ಮತ್ತು ತಿರುಪತಿ ನಡುವೆ ಚಲಿಸುತ್ತದೆ. ಪ್ರತಿನಿತ್ಯ ಸಾವಿರಾರು ತಿರುಮಲ ಭಕ್ತರು ಈ ರೈಲಿನಲ್ಲಿ ಪ್ರಯಾಣಿಸುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!