Thursday, August 11, 2022

Latest Posts

ಬೋನಿಗೆ ಬಿದ್ದ ಚಿರತೆ: ರೈತರ ಆತಂಕ ನಿವಾರಣೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಪಾಂಡವಪುರ:

ತಾಲೂಕಿನ ಚಂದ್ರೆ ಗ್ರಾಮದ ಹೊರವಲಯದಲ್ಲಿ ರಂಗನಕೊಪ್ಪಲು ಸರ್ವೇ ನಂಬರ್ ವ್ಯಾಪ್ತಿಯಲ್ಲಿ ರೈತ ಕೆಂಪೇಗೌಡ ಜಮೀನಿನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಇರಿಸಿದ್ದ ಬೋನ್‌ಗೆ ಚಿರತೆಯೊಂದು ಬಿದ್ದಿದೆ.
ಇತ್ತೀಚಿನ ದಿನಗಳಲ್ಲಿ ಚಂದ್ರೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ಚಿರತೆಯ ಹಾವಳಿ ಹೆಚ್ಚಿಗಿತ್ತು ಎನ್ನಲಾಗಿದೆ. ರೈತರು ಮೇಕೆ, ಕುರಿ, ಹಸುಗಳನ್ನು ಬೇಟೆಯಾಡಿ ತಿನ್ನಿಂದು ರೈತರಲ್ಲಿ ಆತಂಕ ಹೆಚ್ಚಿಸಿತ್ತು. ಈ ಹಿನ್ನೆಲೆಯಲ್ಲಿ ರೈತರು ಚಿರತೆ ಸೆರೆಹಿಡಿಯುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಇದರಿಂದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ರೈತ ಕೆಂಪೇಗೌಡರ ಜಮೀನನಲ್ಲಿ ಬೋನ್ ಇರಿಸಿದ್ದರು. ಅರಣ್ಯ ಇಲಾಖೆಯ ಅಧಿಕಾರಿಗಳು ಇರಿಸಿದ್ದ ಬೋನಿಗೆ ಭಾನುವಾರ ರಾತ್ರಿ ಚಿರತೆ ಬಿದಿದ್ದೆ. ಸೋಮವಾರ ಬೆಳಿಗ್ಗೆ ರೈತರು ಜಮೀನಿನ ಬಳಿ ಹೋದಾಗ ಚಿರತೆ ಬೋನಿಗೆ ಬಿದ್ದಿರುವುದು ದೃಡಪಟ್ಟಿದೆ.
ಬಳಿಕ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಬೋನಿಗೆ ಬಿದ್ದ ಚಿರತೆಯನ್ನು ಬೋನ್ ಸಮೇತ ವಾಹನದ ಮೂಲಕ ತೆಗೆದುಕೊಂಡು ಹೋಗಿದ್ದಾರೆ. ಮೇಲಾಧಿಕಾರಿಗಳಿಂದ ಅನುಮತಿಪಡೆದು ಚಿರತೆಯನ್ನು ನಾಗರಹೊಳೆ ಕಾಡಿಗೆ ಬಿಡಲಾಗುವುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss