ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ದೇಶದಲ್ಲಿ ಕೊರೋನಾ 2ನೇ ಅಲೆ ವ್ಯಾಪಕವಾಗುತ್ತಿದ್ದು, ಈ ನಡುವೆ ಖ್ಯಾತ ಮೂವಿ ಬುಕ್ಕಿಂಗ್ ಪ್ಲಾಟ್ ಫಾರ್ಮ್ ಬುಕ್ ಮೈ ಶೋ ತನ್ನ ಸಂಸ್ಥೆಯ 200 ಉದ್ಯೋಗಿಗಳನ್ನು ವಜಾಗೊಳಿಸಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿದ ಬುಕ್ ಮೈ ಶೋ ಸಂಸ್ಥಾಪಕ ಮತ್ತು ಸಿಇಒ ಆಶಿಶ್ ಹೇಮ್ರಾಜನಿ, ಕೊರೋನಾ ನನಗೆ ಅನೇಕ ಪಾಠಗಳನ್ನು ಕಲಿಸಿದೆ. ನಾನು ಇಂದು ಇನ್ನೊಂದು ಪಾಠವನ್ನು ಕಲಿತಿದ್ದೇನೆ. ಸಂಸ್ಥೆಯ 200 ಉದ್ಯೋಗಿಗಳನ್ನು ವಜಾಗೊಳಿಸುತ್ತಿದ್ದು, ಅವರು ಕಳೆದ 15 ತಿಂಗಳುಗಳಿಂದ ಸಂಸ್ಥೆಗಾಗಿ ದುಡಿದಿದ್ದಾರೆ. ಅದಕ್ಕಾಗಿ ನಾನು ಧನ್ಯವಾದ ತಿಳಿಸುತ್ತೇನೆ ಎಂದರು.
COVID19 has taught me many lessons & I learnt another one today. As we let go of 200 of the most incredibility talented & performance driven individuals, each & everyone has messaged, thanking me for the opportunity, the love for @bookmyshow and asking me if they could help (1/4)
— ashish hemrajani (@fafsters) June 10, 2021
ಅಂತೆಯೇ ತಮ್ಮದೇ ಬುಕ್ ಸ್ಮೈಲ್ ಇಂಡಿಯಾ ಚಾರಿಟಿ ಮೂಲಕ 10ಲಕ್ಷ ಮಂದಿಗೆ ನೆರವು ನೀಡಲಾಗುತ್ತಿದೆ ಎಂದು ಹೇಮ್ರಾಜನಿ ಟ್ವೀಟ್ ಮಾಡಿದ್ದಾರೆ.
ಬುಕ್ ಮೈ ಶೋ ಸಂಸ್ಥೆ ದೇಶಾದ್ಯಂತ ತನ್ನ 1500 ಉದ್ಯೋಗಿಗಳಲ್ಲಿ ಶೇ. 31 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ. ಈ ಹಿಂದೆಯೂ ಕೂಡ ಕೋವಿಡ್ ಮೊದಲ ಅಲೆ ವೇಳೆ 270 ಮಂದಿ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿತ್ತು. ಇದೀಗ 2ನೇ ಅಲೆ ವೇಳೆ 200 ಮಂದಿಯನ್ನು ತೆಗೆದುಹಾಕಿದೆ.