ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ವರದಿ, ಶಿವಮೊಗ್ಗ:
ಕಾರ್ಯಕರ್ತರು ಹಾಗೂ ಮತದಾರರ ಸಮಸ್ಯೆ ಪರಿಹರಿಸಲು ಬೂತ್ ಅಧ್ಯಕ್ಷರು ಪ್ರಾಮಾಣಿಕವಾಗಿ ಶ್ರಮಿಸಬೇಕೆಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ರಾಜ್ಯ ಬಿ ಜೆ ಪಿ ಯಿಂದ ಶನಿವಾರ ಹಮ್ಮಿಕೊಂಡಿದ್ದ ಪ್ರತಿ ಬೂತ್ ಅಧ್ಯಕ್ಷರ ಮನೆಗಳಿಗೆ ನಾಮ ಪಲಕ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೂತ್ ಅಧ್ಯಕ್ಷರ ಜವಾಬ್ದಾರಿ ಮಹತ್ವದ್ದಾಗಿದೆ. ನಾಯಕರು ಮತದಾರರ ಕೈಗೆ ಸಿಕ್ಕುವುದು ಕಷ್ಟ. ಅದರೆ ಬೂತ್ ಅಧ್ಯಕ್ಷರು ಮಾತ್ರ ಬೇಕಾದ ಸಮಯಕ್ಕೆ ಸಿಕ್ಕಲಿದ್ದಾರೆ. ಹೀಗಾಗಿ ಸ್ಪಂದಿಸುವವರು ಕೂಡ ಬೂತ್ ಅಧ್ಯಕ್ಷರೇ ಆಗಿದ್ದಾರೆ ಎಂದರು.
ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸರಿಯಾಗಿ ಯಾರೂ ಆಯ್ಕೆ ಆಗಿಲ್ಲ. ಆದರೆ ಬಿಜೆಪಿ ತನ್ನ ಬೂತ್ ಮಟ್ಟದ ಅಧ್ಯಕ್ಷರ ಆಯ್ಕೆ ಮಾಡಿ ಅವರ ಮನೆಯ ಮುಂದೆ ನಾಮಫಲಕ ಹಾಕುತ್ತಿರುವುದು ಈ ಪಕ್ಷದಲ್ಲಿ ಮಾತ್ರ ಸಾಧ್ಯ. ಹಿಂದೆ ಗಲಾಟೆಯಾಗುವ ಸಾಧ್ಯತೆ ಇತ್ತು. ಹೀಗಾಗಿ ಒಂದು ಬೂತ್ ನಲ್ಲಿ 10 ಜನರನ್ನು ನೇಮಕ ಮಾಡಬೇಕಿತ್ತು. ಈಗ ಆ ಸ್ಥಿತಿ ಇಲ್ಲ. ಒಂದು ಬೂತ್ ಗೆ ಒಬ್ಬರನ್ನೇ ನೇಮಿಸಿ ನಿರ್ವಹಿಸಲಾಗುತ್ತಿದೆಸಲಾಗು ಎಂದರು.
299 ಬೂತ್ ಅಧ್ಯಕ್ಷರ ತಾತ್ಸಾರ ಮಾಡದೆ ಉತ್ಸಹ ತುಂಬಬೇಕಿದೆ. ಚಟುವಟಿಕೆಯಿಂದಾ ಸಂಘಟನೆ ಶಕ್ತಿ ಹೆಚ್ಚಿಸಬೇಕಿದೆ ಎಂದ ಅವರು, ನಗರದಲ್ಲಿಪ್ರವಾಸ ಮಾಡುವ ಸಂದರ್ಭದಲ್ಲಿ ಬೂತ್ ಅಧ್ಯಕ್ಷರ ಮನೆಯ ಮುಂದೆ ಫಲಕ ಕಂಡರೆ ತಾವು ದಿಢೀರ್ ಭೇಟಿ ನೀಡುವುದಾಗಿ ಹೇಳಿದರು.