spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಡದಿಯ ಮನಸ್ಸು ಖುಷಿಗೊಳಿಸಲು ತಿರುಗುವ ಮನೆಕಟ್ಟಿದ ಭೂಪ!

- Advertisement -Nitte
  • ಕಾವ್ಯಾ ಜಕ್ಕೊಳ್ಳಿ

ಇದೆಂಥ ಅದ್ಭುತ ಮನೆ… ಸೂರ್ಯ ಉದಯಿಸುವುದನ್ನು ನೋಡೋದಕ್ಕೆ ಅಂಗಳಕ್ಕ ಹೋಗಬೇಕಾಗಿಲ್ಲ, ಪಕ್ಕದ ಮನೆಯವರೊಂದಿಗೆ ಹರಟೆ ಹೊಡೆಯಲು ಕಟ್ಟೆಗೆ ಬರಬೇಕಾಗಿಲ್ಲ, ಹಿತ್ತಲಿಗೆ ಹೋಗೋದಕ್ಕೆ ಹಿಂಬದಿ ಬಾಗಿಲೇ ತೆರೆಯಬೇಕಾಗಿಲ್ಲ. ಮನೆಯ ಒಂದೇ ಜಾಗದಲ್ಲಿ ಕುಳಿತು ಇವೆಲ್ಲವನ್ನೂ ಮಾಡಬಹುದು.. ಇದು ಹೇಗೇ ಸಾಧ್ಯ ಅಂತೀರಾ?

ಆಶ್ಚರ್ಯವೆನಿಸಿದ್ರೂ ನಂಬಲೇ ಬೇಕು.. ಏಕೆಂದರೆ ಇದು ಗಿರಿಗಿಟ್ಟಿಯಂತೆ ತಿರುಗುವ ಮನೆ. ಒಂದೇ ಜಾಗದಲ್ಲಿ ಕುಳಿತು ಮನೆಯ ನಾಲ್ಕು ದಿಕ್ಕಿನ ಸೌಂದರ್ಯವನ್ನು ಸವಿಯಬಹುದಾದ ವಿಶಿಷ್ಟ ಮನೆ.

ಈ ಮನೆ ಇರುವುದು ಎಸ್ಆರ್ಬಿಎಸಿ ಪಟ್ಟಣ ಸಮೀಪದ ಉತ್ತರ ಬೋಸ್ನಿಯಾದ ಬಟ್ಟ ಬಯಲಿನ ಪ್ರದೇಶದಲ್ಲಿ.

ವೈವಿಧ್ಯಮಯ ನೋಟವನ್ನು ನೋಡಲು ಬಯಸಿದ ತನ್ನ ಪ್ರೀತಿಯ ಮಡದಿಗಾಗಿ 72 ವರ್ಷದ ವೋಜಿನ್ ಕುಸಿಕ್ ರಾಯಿಟರ್ಸ್ ತಾನೇ ಸ್ವತಃ ನಿರ್ಮಿಸಿದ ಮನೆ ಇದು.

ಹೇಗಿದೆ ಮನೆ?
ಈ ತಿರುಗು ಮನೆ ಒಟ್ಟು 7-ಮೀಟರ್ ಅಕ್ಷದ ಸುತ್ತ ಸುತ್ತುತ್ತದೆ. ನಿಧಾನ ಗತಿಯಲ್ಲಿ ತಿರುಗಿಸಿದರೆ 24 ಗಂಟೆಗಳಲ್ಲಿ ಒಂದು ಸಂಪೂರ್ಣ ವೃತ್ತ ಪೂರ್ಣಗೊಳ್ಳುತ್ತದೆ. ಅದೇ ವೇಗವಾಗಿ ತಿರುಗಿಸಿದರೆ 22 ಸೆಕೆಂಡುಗಳಲ್ಲಿ ವೃತ್ತ ಪೂರ್ಣಗೊಳ್ಳುತ್ತದೆ.

ಮನೆಯ ಒಂದೇ ಜಾಗದಲ್ಲಿ ಕುಳಿತು, ಹೊಲ, ಕಾಡು, ಹಾಗೂ ಹತ್ತಿರದಲ್ಲಿರುವ ಹೊಳೆ, ಅಕ್ಕ-ಪಕ್ಕದ ಮನೆಯನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಕುಸಿಕ್ ಗೆ ಸ್ಫೂರ್ತಿ ಏನು?
ಕುಸಿಕ್ ಅವರು ಸರ್ಬಿಯನ್-ಅಮೆರಿಕನ್ ಸಂಶೋಧಕರಾದ ನಿಕೋಲಾ ಟೆಸ್ಲಾ ಮತ್ತು ಮಿಹಾಜ್ಲೋ ಪುಪಿನ್ ಅವರಿಂದ ಸ್ಫೂರ್ತಿ ಪಡೆದಿದು ಇಂತಹ ಅಧ್ಬುತ ಸಾಹಸಕ್ಕೆ ಕೈಹಾಕಿದರು. ಬಡ ಕುಟುಂಬವಾದ್ದರಿಂದ ಕುಸಿಕ್ ಅವರಿಗೆ ಓದುವ ಆಸಕ್ತಿ ಇದ್ದರೂ, ಓದಲು ಸಾಧ್ಯವಾಗಲಿಲ್ಲ. ತಾವೇ ಸ್ವತಃ ಹೊಸ ರೀತಿಯ ವಸ್ತುಗಳನ್ನು ತಯಾರಿಸುವುದನ್ನು ಕಲಿತು, ಹೊಟ್ಟೆ ಚೀಲ ತುಂಬಿಸಿಕೊಳ್ಳುತ್ತಿದ್ದರು. ಇವರ ಈ ವಿಶಿಷ್ಟ ವೃತ್ತಿಯೇ ಇಂದು ತಿರುಗುವ ಮನೆ ಕಟ್ಟಲು ಅಡಿಪಾಯವಾಯಿತು.

ಏನು ಹೇಳಿದ್ದಾರೆ ನೋಡಿ ತಿರುಗುವ ಮನೆಯ ಕರ್ತೃ?
“ನಾನು ಪದೇ ಪದೇ ಮನೆಯನ್ನು ಬದಲಿಸುವದರಿಂದ ನನ್ನ ಮಡದಿ ಸಿಟ್ಟಾಗುತ್ತಿದ್ದಳು. ಹಾಗಾಗಿ ಅವಳಿಗೆ ಏನಾದರೂ ಹೊಸ ರೀತಿಯ ಮನೆ ನಿರ್ಮಿಸಿಕೊಡಬೇಕೆಂದು ಬಯಸಿದೆ. ಆಗ ನನಗೆ ಹೊಳೆದಿದ್ದು ಈ ತಿರುಗುವ ಮನೆ. ಹೃದಯ ಸಂಬಂಧಿ ಕಾಯಿಲೆಯಿಂದ ಕೆಲವು ಸಮಯ ಆಸ್ಪತ್ರೆ ಸೇರಬೇಕಾಯ್ತು. ಆಸ್ಪತ್ರೆಯಲ್ಲಿ ದಾಖಲಾದ ಸಮಯವನ್ನು ಹೊರತು ಪಡಿಸಿದರೆ ಆರು ವರ್ಷದಲ್ಲಿ ತಿರುಗುವ ಮನೆ ನಿರ್ಮಿಸಿದ್ದೇನೆ” ಎಂದಿದ್ದಾರೆ ಕುಸಿಕ್.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss