ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ಲೈನ್ ಡೆಸ್ಕ್:
‘ಬಾಕ್ಸರ್ ಲೊವ್ಲಿನಾ ಬೋರ್ಗೋಹೈನ್’ ಭಾರತದೆಲ್ಲೆಡೆ ಇಂದು ಮೊಳಗುತ್ತಿರೋ ಏಕೈಕ ಹೆಸರು!
ಟೋಕಿಯೋ ಒಲಂಪಿಕ್ಸ್ನಲ್ಲಿ ಲೊವ್ಲಿನಾ ಸೆಮಿ ಫೈನಲ್ಸ್ ತಲುಪಿದ್ದಾರೆ. ಫೈನಲ್ಸ್ ಗೆದ್ದರೆ ಇತಿಹಾಸ, ಸೆಮಿ ಫೈನಲ್ಸ್ನಲ್ಲಿ ಸೋತರೂ ಭಾರತಕ್ಕೆ ಕಂಚಿನ ಪದಕ ದೊರೆಯಲಿದೆ.
2008 ರಲ್ಲಿ ವಿಜೇಂದರ್ ಸಿಂಗ್, 2016 ರಲ್ಲಿ ಮೇರಿ ಕೋಮ್ ಕಂಚಿನ ಪದಕ ತಂದು ದೇಶದ ಹೆಮ್ಮೆಯ ವಿಷಯವಾಗಿದ್ದರು. ಭಾರತಕ್ಕೆ ಬಾಕ್ಸಿಂಗ್ನಲ್ಲಿ ಪದಕ ತಂದುಕೊಡುತ್ತಿರುವ ಮೂರನೇ ಕ್ರೀಡಾಪಟು ಲೊವ್ಲಿನಾ ಆಗಿದ್ದಾರೆ.
23 ವರ್ಷದ ಲೊವ್ಲಿನಾ ಅಮ್ಮನ ಮುದ್ದಿನ ಮಗಳು. ಈ ವರ್ಷ ಫೆಬ್ರವರಿಯಲ್ಲಿ ಅಸ್ಸಾಮಿನ ಗೋಲಾಘಾಟ್ ಜಿಲ್ಲೆಯಲ್ಲಿರುವ ತನ್ನ ಹಳ್ಳಿ ಬರೋಮುಖಿಯಾಗೆ ಲೊವ್ಲಿನಾ ತೆರಳಿದ್ದರು. ಲೊವ್ಲಿನಾ ತಾಯಿ ಕಿಡ್ನಿ ಫೇಲ್ಯೂರ್ ಸಮಸ್ಯೆ ಎದುರಿಸುತ್ತಿದ್ದು, ಒಂದು ಕ್ಷಣವೂ ಅಮ್ಮನಿಂದ ದೂರ ನಿಲ್ಲದೆ ತಾನೇ ತಾಯಿಯಾಗಿ, ಅಮ್ಮನನ್ನು ಮಗುವಿನಂತೆ ನೋಡಿಕೊಂಡಿದ್ದಾರೆ.
ಇದೀಗ ಪದಕ ಕೊರಳಿಗೆ ಸಿಕ್ಕಿಸಿಕೊಂಡು ಹಳ್ಳಿಗೆ ಮರಳಲಿರುವ ಭವಿಷ್ಯದ ಕಲ್ಪನೆಯೇ ರೋಚಕತೆ ಮೂಡಿಸುತ್ತದೆ.
ಲೊವ್ಲಿನಾ ತಂದೆ ಕೂಡ ಯಾವುದೋ ಬ್ಯುಸಿನೆಸ್ಮೆನ್ ಅಲ್ಲ, ಬರೊಮುಖಿಯಾದ ಟೀ ಎಸ್ಟೇಟ್ನಲ್ಲಿ ತಂದೆ ಟಿಕೆನ್ ಕೆಲಸ ಮಾಡುತ್ತಾರೆ. ಲೊವ್ಲಿಯಾಗೆ ಇಬ್ಬರು ಟ್ವಿನ್ ಸಹೋದರಿಯರಿದ್ದಾರೆ. ಟೀ ಎಸ್ಟೇಟ್ನಲ್ಲಿ ಕೆಲಸ ಮಾಡುವ ಲೊವ್ಲಿನಾ ತಂದೆಗೆ ಬಡತನ ಇತ್ತು, ಆದರೆ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯೂ ಇತ್ತು. ತನಗೆ ಇಲ್ಲವಾದರೂ ತನ್ನ ಮಕ್ಕಳು ಇಷ್ಟಪಟ್ಟಿದ್ದನ್ನು ಮಾಡಬೇಕು ಎನ್ನುವುದು ಟಿಕೆನ್ ಆಲೋಚನೆ.
ಎಲ್ಲದರ ಮಧ್ಯೆ ವಿದ್ಯಾಭ್ಯಾಸವೂ ಮುಖ್ಯ ಎಂದು ನಂಬಿದ್ದ ಪೋಷಕರು ಲೊವ್ಲಿನಾರನ್ನು ಆದರ್ಶ ಹಿಂದಿ ಹೈ ಸ್ಕೂಲ್ಗೆ ಸೇರಿಸುತ್ತಾರೆ. ಇಲ್ಲಿಂದ ಲೊವ್ಲಿನಾ ಬಾಕ್ಸಿಂಗ್ ಜರ್ನಿ ಆರಂಭವಾಯ್ತು. ಎಸ್ಎಐ ಸೆಂಟರ್ಗೆ ಬಾಕ್ಸಿಂಗ್ ಟ್ರೇನಿಗಳನ್ನು ಹುಡುಕುತ್ತಿದ್ದ ಕೋಚ್ ಪದಮ್ ಬೊರೊ, ಲೊವ್ಲಿನಾ ಶಾಲೆ ತಲುಪುತ್ತಾರೆ. ‘ಲೊವ್ಲಿನಾ’ ಎನ್ನುವ ವಜ್ರವನ್ನು ಹುಡುಕಿ ಆರಿಸಿ ಕರೆದೊಯ್ಯುತ್ತಾರೆ.
ತನ್ನೂರಿನಿಂದ 300 ಕಿ.ಮೀ ದೂರ ಇರುವ ಗುಹಾವಟಿಯಲ್ಲಿ ಲೊವ್ಲಿನಾ ಇರಬೇಕಾಗಿದ್ದು, ತಂದೆ- ತಾಯಿ ಬಿಟ್ಟು ಆಕೆ ಇದ್ದದ್ದು ಇದೇ ಮೊದಲು. ಶ್ರದ್ಧೆಯಿಂದ ತಾನು ಬಂದಿರುವ ಕೆಲಸದ ಮೇಲಷ್ಟೇ ಗಮನ ಹೊಂದಿದ್ದ ಲೊವ್ಲಿನಾ 70 ಕೆ.ಜಿ. ಕೆಟಗರಿಯಲ್ಲಿ ಸಬ್ ಜೂನಿಯರ್ ನ್ಯಾಷನಲ್ ಚಾಂಪಿಯನ್ ಆಗುತ್ತಾರೆ. ತದನಂತರ ಭೋಪಾಲ್ನ ನ್ಯಾಷನಲ್ ಕ್ಯಾಂಪ್ಗೆ ಆಯ್ಕೆಯಾಗುತ್ತಾರೆ.
ನಂತರ ಲೊವ್ಲಿನಾರ ಗೆಲುವಿನ ಓಟ ಆರಂಭವಾಯ್ತು. ನಾಲ್ಕು ಅಂತಾರಾಷ್ಟ್ರೀಯ ಪದಕ, ನ್ಯಾಷನಲ್ ಕಪ್ನಲ್ಲಿ ಬೆಳ್ಳಿ ಪದಕ ಪಡೆದರು. ನಂತರ 70 ಕೆ.ಜಿ ಇಂದ 75 ಕೆ.ಜಿ ಸೀನಿಯರ್ ಕೆಟಗರಿಗೆ ಬಂದು ಏಶಿಯನ್ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ, ವಿಶ್ವ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಹಾಗೂ ರಶ್ಯಾದಲ್ಲಿ ನಡೆದ ವಿಶ್ವ ಚಾಂಪಿಯನ್ಶಿಪ್ನಲ್ಲಿಯೂ ಕಂಚಿನ ಪದಕ ಪಕ್ಕಾ ಆಗಿಸಿಕೊಂಡು ಭಾರತದ ಹೆಮ್ಮೆಯಾಗಿದ್ದಾರೆ.
ಭಾರತದ ಹೆಣ್ಣುಮಗಳು ಚಿನ್ನವನ್ನೇ ತರಲಿ ಎಂದು ದೇಶವೇ ಹಾರೈಸಿ ಕಾತರಿಸಿದೆ.