ಹೊಸದಿಗಂತ ಆನ್ಲೈನ್ ಡೆಸ್ಕ್:
ಇರಾಕಿನಲ್ಲಿ ಪಟ್ಟಣವೊಂದರಲ್ಲಿ ವೈದ್ಯಕೀಯ ಅಚ್ಚರಿ ನಡೆದಿದೆ.
ವೈದ್ಯರೇ ಇದನ್ನು ಎಕ್ಸ್ಟ್ರೀಮ್ಲಿ ರೇರ್ ಎಂದಿದ್ದಾರೆ..
ಮೂರು ಜನನಾಂಗ ಹೊಂದಿದ ಮಗುವೊಂದು ಜನಿಸಿದೆ. ಹುಟ್ಟಿದಾಗ ಸಹಜವಾಗಿಯೇ ಇದ್ದ ಮಗುವಿನ ಜನನಾಂಗ ಮೂರು ತಿಂಗಳಲ್ಲಿ ಊದಿಕೊಂಡಂತೆ ಕಾಣಿಸಿದೆ. ತಕ್ಷಣ ವೈದ್ಯರ ಬಳಿ ಕರೆತಂದ ಪೋಷಕರಿಗೆ ಆಶ್ಚರ್ಯ ಕಾದಿತ್ತು.
ಊತ ಇಳಿಸಲು ವೈದ್ಯರು ವೃಷಣ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಮೇಲ್ಭಾಗ ಮತ್ತು ಕೆಳಭಾಗದ ಚರ್ಮದ ಹೊದಿಕೆ ಅಡಿಯಲ್ಲಿ ಇನ್ನೆರಡು ಶಿಶ್ನಗಳನ್ನು ವೈದ್ಯರು ಕಂಡಿದ್ದಾರೆ.
ಇದು ಅಪರೂಪದಲ್ಲಿ ಅಪರೂಪ, 50-60 ಲಕ್ಷ ಮಕ್ಕಳಲ್ಲಿ ಒಬ್ಬರಿಗೆ ಈ ರೀತಿ ಸಮಸ್ಯೆಯಾಗಬಹುದು. ಇದು ಜಗತ್ತಿನಲ್ಲಿ ಅಧಿಕೃತವಾಗಿ ದಾಖಲಾದ ಮೊದಲನೇ ತ್ರೀಪಲಿಯಾ ಕೇಸ್ ಆಗಿದೆ ಎಂದು ಡಾ. ಶಾಕೀರ್ ಸಲಿಮ್ ಜಬಾಲಿ ಹೇಳಿದ್ದಾರೆ.
ಮಗುವಿನ ಮುಖ್ಯ ಜನನಾಂಗ ಹೊರತುಪಡಿಸಿ ಇನ್ನೆರಡನ್ನು ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದಿದ್ದಾರೆ. ಮಗು ಆರೋಗ್ಯಕರವಾಗಿದೆ.