ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ಲೈನ್ ಡೆಸ್ಕ್:
ಸಾಮಾಜಿಕ ಜಾಲತಾಣದಲ್ಲಿ ಪುಟಾಣಿಯೊಬ್ಬ ತನ್ನ ಹಾಡಿನಿಂದ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾನೆ.
ಜಾನೆ ಮೇರೆ ಜಾನೆ ಮನ್, ಬಚ್ಪನ್ ಕಾ ಪ್ಯಾರ್ ಮುಜೆ ಭೂಲ್ ನಹಿ ಜಾನಾ ರೇ…
ಈ ಹಾಡನ್ನು ಮುಗ್ಧವಾಗಿ ದೊಡ್ಡ ದನಿಯಲ್ಲಿ ಹಾಡುವ ಈ ಬಾಲಕನನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.
ಚತ್ತೀಸಗಢದ ಸಹದೇವ್ ಕುಮಾರ್ ಹೆಸರಿನ ಬಾಲಕ ಇದೀಗ ಸಿಕ್ಕಾಪಟ್ಟೆ ಫೇಮಸ್ ಆಗಿದ್ದು, ಚತ್ತೀಸ್ಗಢದ ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ಕೂಡ ಸಹದೇವ್ನನ್ನು ಭೇಟಿ ಮಾಡಿ ಮಾತನಾಡಿಸಿ ಹಾಡು ಹಾಡಿಸಿದ್ದಾರೆ.
बचपन का प्यार….वाह! pic.twitter.com/tWUuWFP71f
— Bhupesh Baghel (@bhupeshbaghel) July 27, 2021
ಬಾಲಿವುಡ್ ರ್ಯಾಪರ್ ಬಾದ್ಶಾ ಕೂಡ ಈ ಬಾಲಕನ ಕಲೆಗೆ ಮೆಚ್ಚಿ ಅದೇ ಹಾಡನ್ನು ರಿಮಿಕ್ಸ್ ಮಾಡಿ ವಿಡಿಯೋ ಮಾಡಿದ್ದಾರೆ. ಅಲ್ಲದೆ ಸಹದೇವ್ಗೆ ಕರೆ ಮಾಡಿ ಮಾತನಾಡಿಸಲಿದ್ದಾರೆ. ಒಂದೇ ದಿನದಲ್ಲಿ, ಒಂದೇ ಹಾಡಿನಿಂದ ಸಹದೇವ್ ಫೇಮಸ್ ಆಗಿದ್ದು, ಮುಂದೆ ಯಾವ ಹಾಡನ್ನು ಹಾಡುತ್ತಾರೆ ಕಾದುನೋಡಬೇಕಿದೆ.